ವಿದೇಶ

ಅಫ್ಘಾನಿಸ್ತಾನದಲ್ಲಿ ಅವಳಿ ಆತ್ಮಾಹುತಿ ಬಾಂಬ್ ಸ್ಫೋಟ, 50 ಮಂದಿ ಸಾವು

Lingaraj Badiger
ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ಶನಿವಾರ ಅವಳಿ ಆತ್ಮಾಹುತಿ ಬಾಂಬ್ ಸ್ಫೋಟಗೊಂಡಿದ್ದು, ಸ್ಫೋಟದಲ್ಲಿ ಕನಿಷ್ಠ 50 ಮಂದಿ ಮೃತಪಟ್ಟಿದ್ದಾರೆ ಮತ್ತು 160ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಕಾಬುಲ್ ನ ದೆಹ್ ಮೆಜಂಗ್ ಸರ್ಕಲ್ ನಲ್ಲಿ ವಿದ್ಯುತ್ ಸಂಪರ್ಕದ ಮಾರ್ಗ ಬದಲಾವಣೆವೆ ಒತ್ತಾಯಿಸಿ ಸಾವಿರಾರು ಜನ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿಯೇ ಈ ಅವಳಿ ಬಾಂಬ್ ಸ್ಫೋಟಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಾವಿನ ಸಂಖ್ಯೆಯ ಬಗ್ಗೆ ಮತ್ತು ಯಾವ ರೀತಿಯ ಸ್ಫೋಟ ಸಂಭವಿಸಿದೆ ಎಂಬುದರ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ ಎಂದು ಕಾಬೂಲ್ ಸಿಐಡಿ ಮುಖ್ಯಸ್ಥ ಫ್ರೈದೂನ್ ಒಬೈದಿ ಅವರು ಹೇಳಿದ್ದಾರೆ.
SCROLL FOR NEXT