ಹಿಲರಿ ಕ್ಲಿಂಟನ್ (ಸಂಗ್ರಹ ಚಿತ್ರ) 
ವಿದೇಶ

ಡೆಮಾಕ್ರಟಿಕ್ ಪಕ್ಷದ ಅಧಿಕೃತ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಹಿಲರಿ ಕ್ಲಿಂಟನ್ ಆಯ್ಕೆ?

ಅಮೆರಿಕದ ಅಧ್ಯಕ್ಷೀಯ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಹಿಲರಿ ಕ್ಲಿಂಟನ್ ಡೆಮಾಕ್ರಟಿಕ್ ಪಕ್ಷದ ಅಧಿಕೃತ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಹಿಲರಿ ಕ್ಲಿಂಟನ್ ಡೆಮಾಕ್ರಟಿಕ್ ಪಕ್ಷದ ಅಧಿಕೃತ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ  ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಆಯ್ಕೆಯಾಗಲು ಬೇಕಾದ ಅಗತ್ಯ ಪ್ರತಿನಿಧಿಗಳ ಬೆಂಬಲವನ್ನು 68 ವರ್ಷದ ಹಿಲರಿ ಕ್ಲಿಂಟನ್ ಪಡೆದಿದ್ದು, ಡೆಮಾಕ್ರಟಿಕ್ ಪಕ್ಷದ ಅಧಿಕೃತ  ಅಭ್ಯರ್ಥಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಆ ಮೂಲಕ ಡೆಮಾಕ್ರಟಿಕ್ ಪಕ್ಷವನ್ನು ಪ್ರತಿನಿಧಿಸುತ್ತಿರುವ ಮೊದಲ ಮಹಿಳಾ ಅಧ್ಯಕ್ಷೀಯ ಅಭ್ಯರ್ಥಿ ಎಂಬ ಖ್ಯಾತಿಗೂ ಹಿಲರಿ ಪಾತ್ರರಾಗಿದ್ದಾರೆ.

ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಲು ಹಿಲರಿ ಕ್ಲಿಂಟನ್ ಗೆ 2,383 ಪ್ರತಿನಿಧಿಗಳ ಬೆಂಬಲದ ಅಗತ್ಯವಿದ್ದು, ಹಿಲರಿ ಈಗಾಗಲೇ ಅಗತ್ಯ ಸಂಖ್ಯಾ ಬೆಂಬಲವನ್ನು ಪಡೆದಿದ್ದಾರೆ ಎಂದು  ತಿಳಿದುಬಂದಿದೆ. ಡೆಮಾಕ್ರಟಿಕ್ ಪಕ್ಷದ ಮೂಲಗಳ ಪ್ರಕಾರ 608 ಪ್ರಮುಖ ಪ್ರತಿನಿಧಿಗಳ ಪೈಕಿ 561 ಸೂಪರ್ ಡೆಲಿಗೇಟ್ಸ್ ಹಿಲರಿ ಪರ ಮತದಾನ ಮಾಡಿದ್ದು, ಕೇವಲ 47 ಮಂದಿ ಸೂಪರ್  ಡೆಲಿಗೇಟ್ಸ್ ಸ್ಯಾಂಡರ್ಸ್ ಪರ ಮತದಾನ ಮಾಡಿದ್ದಾರೆ. ಹೀಗಾಗಿ ಹಿಲರಿ ಕ್ಲಿಂಟನ್ ಅಧಿಕೃತವಾಗಿ ಡೆಮಾಕ್ರಟಿಕ್ಸ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಿಲರಿ ಟ್ವೀಟ್ ಮಾಡಿದ್ದು, ಅಧ್ಯಕ್ಷೀಯ ಅಭ್ಯರ್ಥಿ ಸ್ಥಾನಕ್ಕೆ ಬೇಕಾದ ಪ್ರಾಥಮಿಕ ಬೆಂಬಲವನ್ನು ಪಡೆದಿದ್ದಾನೆ ಎಂದು ಟ್ವೀಟ್ ಮಾಡಿದ್ದಾರೆ.

ಡೆಮಾಕ್ರಟಿಕ್ ಪಕ್ಷದಲ್ಲಿ ಹಿಲರಿ ಕ್ಲಿಂಟನ್ ತೀವ್ರ ಪೈಪೋಟಿ ನೀಡಿದ್ದ ಸೆನೆಟರ್ ಸ್ಯಾಂಡರ್ಸ್ ಕಳೆದ ಜುಲೈನಲ್ಲಿ ರೇಸ್ ನಿಂದ ಹಿಂದೆ ಸರಿಯುವುದರೊಂದಿಗೆ ಹಿಲರಿ ಕ್ಲಿಂಟನ್ ಅವರ ಗೆಲುವಿನ  ಹಾದಿ ಸುಗಮವಾಗಿತ್ತು. ಆದರೂ ಪಕ್ಷದ ಪ್ರಮುಖ ಪ್ರತಿನಿಧಿಗಳು ಇನ್ನೂ ಮತದಾನ ಮಾಡಿರದ ಕಾರಣ ಹಿಲರಿ ಆಯ್ಕೆ ಅಸ್ಪಷ್ಟವಾಗಿತ್ತು. ಆದರೆ ನಿನ್ನೆ ಪಕ್ಷದ ಪ್ರಮುಖ ಪ್ರತಿನಿಧಿಗಳು ಹಿಲರಿ ಪರ  ಮತದಾನ ಮಾಡಿದ್ದು, ಹಿಲರಿ ಡೆಮಾಕ್ರಟಿಕ್ ಪಕ್ಷದ ಅಧಿೃಕೃತ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದಾರೆ. ಇನ್ನು ಕೇವಲ ಅಧಿಕೃತ ಘೋಷಣೆ ಮಾತ್ರ ಬಾಕಿ, ಇದ್ದು ಕೆಲವೇ ಹೊತ್ತಿನಲ್ಲಿ ಪಕ್ಷದ ವತಿಯಿಂದ  ಅಧಿಕೃತ ಘೋಷಣೆ ಹೊರ ಬೀಳುವ ಸಾಧ್ಯತೆ ಇದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT