ಐಎಸ್ ಐಎಸ್ ಉಗ್ರಗಾಮಿ ಸಂಘಟನೆ ನಾಯಕ ಅಬು ಬಕ್ರ್ ಅಲ್ ಬಾಗ್ದಾದಿ 
ವಿದೇಶ

ವಾಯುದಾಳಿಯಲ್ಲಿ ಐಎಸ್ಐಎಸ್ ನಾಯಕ ಅಬು ಬಕ್ರ್ ಅಲ್ ಬಾಗ್ದಾದಿಗೆ ಗಾಯ: ವರದಿ

ಐಎಸ್ ಐಎಸ್ ಉಗ್ರಗಾಮಿ ಸಂಘಟನೆಯ ಸ್ವಘೋಷಿತ ನಾಯಕ ಅಬು ಬಕ್ರ್ ಅಲ್ ಬಾಗ್ದಾದಿ ಸಂಯೋಜಿತ ಪಡೆಯ ವಾಯುದಾಳಿಗೆ...

ಲಂಡನ್: ಐಎಸ್ ಐಎಸ್ ಉಗ್ರಗಾಮಿ ಸಂಘಟನೆಯ ಸ್ವಘೋಷಿತ ನಾಯಕ ಅಬು ಬಕ್ರ್ ಅಲ್ ಬಾಗ್ದಾದಿ ಸಂಯೋಜಿತ ಪಡೆಯ ವಾಯುದಾಳಿಗೆ ಗಾಯಗೊಂಡಿದ್ದಾನೆ ಎಂದು ಮಾಧ್ಯಮ ವರದಿ ಮಾಡಿದೆ.

ಬಾಗ್ದಾದಿ ತನ್ನ ಬೆಂಗಾವಲಿನೊಂದಿಗೆ ಸಂಘಟನೆಯ ಇತರ ಸದಸ್ಯರೊಡಗೂಡಿ ಪ್ರಯಾಣಿಸುತ್ತಿದ್ದಾಗ ವಾಯು ದಾಳಿಗೆ ಒಳಗಾಗಿದ್ದಾನೆ ಎಂದು ಎಕ್ಸ್ ಪ್ರೆಸ್.ಕೊ.ಯುಕೆ ವರದಿ ಮಾಡಿದೆ.

ಇರಾಕ್ ನ ಸ್ಥಳೀಯ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಇರಾಕ್ ನ ನ್ಯೂಸ್ ಚಾನೆಲ್ ಅಲ್ ಸುಮಾರಿಯಾ ವರದಿ ಮಾಡಿದ್ದು, ಸಂಯೋಜಿತ ವಾಯು ದಾಳಿಯಲ್ಲಿ ಬಾಗ್ದಾದಿ ಮತ್ತು ಇತರರು ಗಾಯಗೊಂಡಿದ್ದಾರೆ.

ಅಂತಾರಾಷ್ಟ್ರೀಯ ಸಮ್ಮಿಶ್ರ ಸರ್ಕಾರ ನಿನ್ನೆ ಇರಾಕ್ ಮತ್ತು ಸಿರಿಯಾದ ಮಧ್ಯೆಭಾಗದ ಗಡಿ ಪ್ರದೇಶದಲ್ಲಿ ಐಸಿಸ್ ಉಗ್ರಗಾಮಿಗಳು ಇರುವ ಸ್ಥಳ ಪತ್ತೆಹಚ್ಚಿ ಬಾಂಬ್ ದಾಳಿ ನಡೆಸಿತ್ತು. ಇದರಲ್ಲಿ ಅಬು ಬಕ್ರ್ ಅಲ್ ಬಾಗ್ದಾದಿ ಮತ್ತು ಐಸಿಸ್ ನ ಕೆಲ ಸದಸ್ಯರು ಗಾಯಗೊಂಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಗುಪ್ತಚರ ಇಲಾಖೆಯ ನಿಖರ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿದೆ.

ಬಗ್ದಾದಿ ಮತ್ತು ಆತನ ಕೆಲ ಸದಸ್ಯರು ಸಿರಿಯಾದಿಂದ ಬೆಂಗಾವಲು ಕಾರಿನಲ್ಲಿ ಇರಾಕ್ ಗೆ ಬಂದಿದ್ದರು. ದಾಳಿ ನಡೆದ ಪ್ರದೇಶ ಐಸಿಸ್ ನ ಪ್ರಭಾವಿ ವಲಯವಾಗಿತ್ತು.
ಕಳೆದ ವರ್ಷ ಮಾರ್ಚ್ 18ರಂದು ಬಾಗ್ದಾದಿ ಮತ್ತು ಇತರ ಮೂವರು ಇಂತಹದೇ ವಾಯುದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಬಾಲಿವುಡ್ ನಟ ನಾನಾ ಪಾಟೇಕರ್ ನಿಧನಕ್ಕೆ ಬಿಗ್ ಟ್ವಿಸ್ಟ್: ಅಸಹಜ ಸಾವು ಕೇಸ್ ದಾಖಲಿಸಿದ ಗೋವಾ ಪೊಲೀಸರು!

ರೈಲಿನಲ್ಲಿ 'ನನ್ನ ಸುತ್ತಲೂ ಬರೀ ಪುರುಷರೇ ಇದ್ದಾರೆ': ಆಂಧ್ರದಲ್ಲಿ ಶವವಾಗಿ ಪತ್ತೆಯಾದ ಡ್ಯಾನ್ಸರ್‌ ಕೊನೆಯ ಸಂದೇಶ!

ಬೇಕಾದರೆ ನನ್ನ ವಿರುದ್ಧವೂ ಫಾರ್ಮ್‌ - 7 ಸಲ್ಲಿಸಿ: ಕಾಂಗ್ರೆಸ್'ಗೆ BJP ಸಂಸದ ಯದುವೀರ್ ಒಡೆಯರ್ ಸವಾಲು