ಪ್ರಣಬ್ ಮುಖರ್ಜಿ 
ವಿದೇಶ

ಒಗ್ಗಟ್ಟಿನ ಪ್ರಯತ್ನದಿಂದ ಮಾತ್ರ ಭಯೋತ್ಪಾದನೆ ನಿರ್ಮೂಲನೆ ಸಾಧ್ಯ: ಪ್ರಣಬ್ ಮುಖರ್ಜಿ

ಭಯೋತ್ಪಾದನೆಯನ್ನು ಗಡಿ ಇಲ್ಲದ ಜಾಗತಿಕ ಪಿಡುಗು ಎಂದು ಆಫ್ರಿಕಾದ ಪ್ರವಾಸದಲ್ಲಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ನಾಗರಿಕ ಪ್ರಪಂಚದ ಒಗ್ಗಟ್ಟಿನ ಪ್ರಯತ್ನದಿಂದ ಮಾತ್ರ ಭಯೋತ್ಪಾದನೆ ನಿರ್ಮೂಲನೆ ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಕ್ರಾ: ಭಯೋತ್ಪಾದನೆಯನ್ನು ಗಡಿ ಇಲ್ಲದ ಜಾಗತಿಕ ಪಿಡುಗು ಎಂದು ಆಫ್ರಿಕಾದ ಪ್ರವಾಸದಲ್ಲಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ನಾಗರಿಕ ಪ್ರಪಂಚದ ಒಗ್ಗಟ್ಟಿನ ಪ್ರಯತ್ನದಿಂದ ಮಾತ್ರ ಭಯೋತ್ಪಾದನೆ ನಿರ್ಮೂಲನೆ ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಘಾನಾದಲ್ಲಿ ಅಲ್ಲಿನ ಅಧ್ಯಕ್ಷ ಜಾನ್ ದ್ರಮನಿ ಮಹಾಮ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಭಾರತವೂ ಸಹ ಹಲವು ದಶಕಗಳಿಂದ ಭಯೋತ್ಪಾದನೆಯ ಸಂತ್ರಸ್ತ ರಾಷ್ಟ್ರವಾಗಿದ್ದು, ಘಾನಾ ಆತಂಕವನ್ನು ಹಂಚಿಕೊಂಡಿದೆ ಎಂದು ಹೇಳಿದ್ದಾರೆ.

" ಭಯೋತ್ಪಾದನೆ ಎಂಬುದು ಗಡಿಯನ್ನು ಹೊಂದಿರದ ಜಾಗತಿಕ ಪಿಡಿಗು, ನಾಶ ಮಾಡುವುದನ್ನು ಹೊರತುಪಡಿಸಿ ಅದಕ್ಕೆ ಯಾವುದೇ ರೀತಿಯ ಗುರಿ ಇಲ್ಲ, ಜಾಗತಿಕ ಸಮುದಾಯ ಒಗ್ಗಟ್ಟಿನಿಂದ ನಿಂತರೆ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಬಹುದು" ಎಂದು ಪ್ರಣಬ್ ಮುಖರ್ಜಿ ಹೇಳಿದ್ದಾರೆ. ಘಾನಾದ ಅಧ್ಯಕ್ಷ ಮಹಾಮ ಮಹಾತ್ಮ ಗಾಂಧಿ ಅವರನ್ನು ಸ್ಮರಿಸಿ ಭಾರತದ ಮೊದಲ ಪ್ರಧಾನಿ ಮತ್ತು ಘಾನಾದ ಮೊದಲ ಅಧ್ಯಕ್ಷ ಕ್ವಾಮೆ ನುಕ್ರಮೆ ಅವರ ನಡುವಿನ ಒಡನಾಟವನ್ನು ನೆನೆದರೆ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ರವೀಂದ್ರ ಠಾಗೂರ್ ಅವರ ಆಫ್ರಿಕಾ ಎಂಬ ಶೀರ್ಷಿಕೆಯುಳ್ಳ ಪದ್ಯವನ್ನು ಉಲ್ಲೇಖಿಸಿದರು.  ಘಾನಾದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಿದರೆ ಭಾರತದ ಕಂಪನಿಗಳು ಹೂಡಿಕೆ ಮಾಡಲು ಸಿದ್ಧವಿರುವುದಾಗಿ ಪ್ರಣಬ್ ಮುಖರ್ಜಿ ಭರವಸೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!

'ಹನೂರು ಎನ್‌ಕೌಂಟರ್': ತಮಿಳುನಾಡು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಉದಯನಿಧಿ ಸ್ಟಾಲಿನ್! ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಆಗ್ರಹ