ರೋಮ್: ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ಐಸಿಸ್) ನ ಮುಖ್ಯಸ್ಥ ಅಬು ಬಕ್ರ್ ಆಲ್-ಬಗ್ಧಾದಿ ಯನ್ನು ಅಮೇರಿಕಾ ಮುಂದಾಳತ್ವದ ಮಿತ್ರ ದೇಶಗಳ ವಾಯು ದಾಳಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಸೋಮವಾರ ವರದಿಯಾಗಿದೆ.
ಇಸ್ಲಾಮಿಕ್ ಸ್ಟೇಟ್ ನ ಹಿಡಿತದಲ್ಲಿರುವ ಉತ್ತರ ಸಿರಿಯಾದ ರಕ್ಕಾದಲ್ಲಿ ಬಾಗ್ಧಾದಿ ಹತ್ಯೆಯಾಗಿದ್ದಾನೆ ಎಂದು ಇರಾನ್ ರಾಷ್ಟ್ರದ ಮಾಧ್ಯಮ ಸಂಸ್ಥೆ ಮತ್ತು ಟರ್ಕಿಶ್ ಸರ್ಕಾರದ ಪರವಾಗಿರುವ ದಿನ ಪತ್ರಿಕೆ ಯೆನಿಸ್ ಸಫಕ್, ಅರೇಬಿಕ್ ನ್ಯೂಸ್ ಏಜೆನ್ಸಿ ಅಲ್-ಅಮಕ್ ವರದಿಯನ್ನುದೇಶಿಸಿ ಹೇಳಿದೆ.
ಅಮಕ್ ನಲ್ಲಿ ಪ್ರಕಟವಾಗಿರುವ ಹೇಳಿಕೆಯ ಪ್ರಕಾರ ಇಸ್ಲಾಮಿಕ್ ಸ್ಟೇಟ್ 'ಕ್ಯಾಲಿಫ್' ಬಾಗ್ಧಾದಿಯನ್ನು ಸೋಮವಾರ ಹತ್ಯೆ ಮಾಡಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
"ರಂಜಾನ್ ನ ಐದನೇ ದಿನದಂದು ರಕ್ಕಾದಲ್ಲಿ ಮಿತ್ರ ರಾಷ್ಟ್ರಗಳು ನಡೆಸಿದ ವಾಯು ದಾಳಿಯಲ್ಲಿ ಅಬು ಬಕ್ರ್ ಅಲ್-ಬಗ್ಧಾದಿ ಹತನಾಗಿದ್ದಾನೆ" ಎಂದು ಹೇಳಿಕೆ ತಿಳಿಸಿದೆ.
ಮಿತ್ರ ರಾಷ್ಟ್ರಗಳು ಇದರ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ. ಇದಕ್ಕೂ ಮುಂಚಿತವಾಗಿ ಸೋಮವಾರ ಇರಾಕಿ ಟಿ ವಿ ವಾಹಿನಿ 'ಅಲ್-ಸುಮಾರಿಯಾ' ಪ್ರಕಾರ ಇಸ್ಲಾಮಿಕ್ ಸ್ಟೇಟ್ ಹಿಡಿತದಲ್ಲಿರುವ ಮೋಸುಲ್ ನಗರದಿಂದ ೬೫ ಕಿಲೋ ಮೀಟರ್ ದೂರದಲ್ಲಿ ನಡೆದ ಮಿತ್ರಪಕ್ಷಗಳ ವಾಯುದಾಳಿಗೆ ಬಾಗ್ಧಾದಿ ಗಾಯಗೊಂಡಿದ್ದಾನೆ ಎಂದಿತ್ತು.
ತನ್ನ ತಲೆಗೆ ೨೫ ಮಿಲಯನ್ ಬಹುಮಾನ ಹೊಂದಿರುವ ಬಾಗ್ಧಾದಿ ಕಳೆದ ೬ ತಿಂಗಳಿನಿಂದ ವಾಸಸ್ಥಾನ ಬದಲಿಸುತ್ತಿದ್ದು, ಮೋಸುಲ್ ಗೆ ಪ್ರಯಾಣ ಬೆಳೆಸಿದ್ದರ ಬಗ್ಗೆ ಅಮೆರಿಕಾ ಬೇಹುಗಾರಿಕಾ ಸಂಸ್ಥೆಗಳಿಗೆ ನಂಬಲಾರ್ಹ ಸುದ್ದಿ ಸಿಕ್ಕಿರುವುದಾಗಿ ಕೆಲವು ಭದ್ರತಾ ಅಧಿಕಾರಿಗಳು ಹೇಳಿರುವುದಾಗ ಅಮೆರಿಕಾದ ಟಿವಿ ವಾಹಿನಿ ಸಿ ಎನ್ ಎನ್ ಸೋಮವಾರ ಪ್ರಸಾರ ಮಾಡಿತ್ತು.