ನವದೆಹಲಿ: ಅಂತಾರಾಷ್ಟ್ರೀಯ ಯೋಗದಿನದಂದು ದುಬೈನಲ್ಲಿ ಯೋಗದ ತರಬೇತಿ ನೀಡಲಿದ್ದಾರೆ.
ಯುಎಇ ಉಪಾಧ್ಯಕ್ಷ ಶೇಕ್ ಮೊಹಮದ್ ಕೂಡ ಭಾಗಿಯಾಗಲಿದ್ದಾರೆ. ಜೂನ್ 21 ರಂದು ದುಬೈನಲ್ಲಿ ನಡೆಯುವ ಯೋಗ ತರಬೇತಿ ಶಿಬಿರದಲ್ಲಿ ದುಬೈ ನ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಭಾಗವಹಿಸಿಲಿದ್ದಾರೆ.
ಇನ್ನೂ ಕೇಂದ್ರ ಸರ್ಕಾರ ಚಂಡೀಗಡದಲ್ಲಿ ವಿಶೇಷ ಯೋಗ ಕಾರ್ಯಕ್ರಮ ಆಯೋಜಿಸಲು ಸರ್ಕಾರ ಚಿಂತಿಸುತ್ತಿದೆ.
ಈಗಾಗಲೇ ಸುಮಾರು 1 ಲಕ್ಷ ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನೋಂದಣಿ ಮಾಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಚಂಡೀಗಡದಾದ್ಯಂತ ಸುಮಾರು 180 ತರಬೇತಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಸರ್ಕಾರ ತಿಳಿಸಿದೆ.