ಕಳ್ಳನಿಗೆ ಥಳಿಸಿದ ಭಾರತೀಯ ನಾರಿ 
ವಿದೇಶ

ಅಮೆರಿಕ: ಗನ್ ತೋರಿಸಿ ಹಣ ದೋಚಲು ಬಂದ ಕಳ್ಳನಿಗೆ ಭಾರತೀಯ ಮಹಿಳೆಯಿಂದ ಗೂಸ

ಗನ್ ತೋರಿಸಿ ಹಣ ದೋಚಲು ಬಂದಿದ್ದ ಕಳ್ಳನಿಗೆ ಅಮೆರಿಕದಲ್ಲಿ ಭಾರತ ಮೂಲದ ಮಹಿಳೆಯೊಬ್ಬರು ಹಿಗ್ಗಾಮುಗ್ಗಾ ಥಳಿಸುವ ಮೂಲಕ ಸುದ್ದಿ ಆಗಿದ್ದಾರೆ...

ನ್ಯೂಯಾರ್ಕ್: ಗನ್ ತೋರಿಸಿ ಹಣ ದೋಚಲು ಬಂದಿದ್ದ ಕಳ್ಳನಿಗೆ ಅಮೆರಿಕದಲ್ಲಿ ಭಾರತ ಮೂಲದ ಮಹಿಳೆಯೊಬ್ಬರು ಹಿಗ್ಗಾಮುಗ್ಗಾ ಥಳಿಸುವ ಮೂಲಕ ಸುದ್ದಿ ಆಗಿದ್ದಾರೆ.

ಜಾರ್ಜಿಯಾದ ಬುರ್ಕೆ ಕಂಟ್ರಿ ಎಂಬಲ್ಲಿ ಅಂಗಡಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿರುವ ಭೂಮಿಕಾ ಪಟೇಲ್ ಅವರಿಗೆ ಮಂಗಳವಾರ 17 ವರ್ಷದ ಯುವಕನೊಬ್ಬ ಖರೀದಿ ನೆಪದಲ್ಲಿ ಅಂಗಡಿ ಪ್ರವೇಶಿಸಿ, ನಂತರ ಕ್ಯಾಶಿಯರ್ ಕೌಂಟರ್‍ನಲ್ಲಿ ಪಿಸ್ತೂಲ್ ತೆಗೆದು ಶೂಟ್ ಮಾಡುತ್ತೇನೆ. ಬೇಗನೆ ಹಣ ನೀಡು ಎಂದು ಗದರಿಸಿದ್ದಾನೆ.

ಇದಕ್ಕೆ ಹೆದರದ ಭೂಮಿಕಾ ಪಟೇಲ್ ಹಣ ಕೊಡಲ್ಲ ಬೇಕಾದ್ರೆ ಶೂಟ್ ಮಾಡು ಎಂದು ಹೇಳಿದ್ದಾರೆ. ಈ ವೇಳೆ ತಮ್ಮ ಸಮಯ ಪ್ರಜ್ಞೆಯಿಂದ ಆತನ ಶರ್ಟ್ ಹಿಡಿದು ಕಿ ಬೋರ್ಡ್‍ನಲ್ಲೇ ಚೆನ್ನಾಗಿ ಹೊಡೆದಿದ್ದಾರೆ. ಈ ವೇಳೆ ಆತ ಹೇಗೋ ತಪ್ಪಿಸಿ ಓಡಿ ಹೋಗಿದ್ದಾನೆ. ಆದರೆ ಭೂಮಿಕಾ ಅಂಗಡಿಯಲ್ಲಿದ್ದ ಸುತ್ತಿಗೆಯನ್ನು ತೆಗೆದು ಆತನ ಹಿಂದೆ ಓಡಿದ್ದಾರೆ.

ಈ ಘಟನೆಯ ಬಳಿಕ ಸಿಸಿಟಿವಿಯ ಆಧಾರಲ್ಲಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಭೂಮಿಕಾ ಅವರ ಸಮಯ ಪ್ರಜ್ಞೆಯನ್ನು ಅಮೆರಿಕದ ಮಾಧ್ಯಮಗಳು ಹೊಗಳಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?