ರಾಮೇಶ್ವರ: ಶ್ರೀಲಂಕಾ ನೌಕಾ ಪಡೆ ನಾಲ್ವರು ಭಾರತೀಯ ಮೀನುಗಾರರನ್ನು ಬಂಧಿಸಿದೆ. ಮೀನುಗಾರರು ಅಂತಾರಾಷ್ಟ್ರೀಯ ಜಲ ಗಡಿಯನ್ನು ದಾಟಿದ್ದರಿಂದ ಬಂಧಿಸಿರುವುದಾಗಿ ನೌಕಾ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ರಾತ್ರಿ ಜಫ್ನಾ ಜಿಲ್ಲೆಯ ಕರೈನಗರದಲ್ಲಿ ಅಕ್ರಮವಾಗಿ ಮೀನುಗಾರಿಕೆ ಮಾಡುತ್ತಿದ್ದ ವೇಳೆ ಬಂಧಿಸಲಾಗಿದ್ದು, ಬಂಧಿತರನ್ನು ಶ್ರೀಲಂಕಾ ಮೀನುಗಾರಿಕೆ ಇಲಾಖೆ ವಶಕ್ಕೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗಷ್ಟೇ ಶ್ರೀಲಂಕಾ ನೌಕಾಪಡೆ 29 ಮೀನುಗಾರರನ್ನು ಬಂಧಿಸಿತ್ತು. ಇದರ ಬೆನ್ನಲ್ಲೇ ಮತ್ತೆ ನಾಲ್ವರನ್ನು ಬಂಧಿಸಿದೆ.