ಸ್ಪೋಟಗೊಂಡ ಸ್ಥಳದಲ್ಲಿ ಪೊಲೀಸರ ಕಾರ್ಯಾಚರಣೆ 
ವಿದೇಶ

ಟರ್ಕಿಯಲ್ಲಿ ಆತ್ಮಾಹುತಿ ಕಾರ್‌‌ ಬಾಂಬ್‌ ಸ್ಫೋಟ: 34 ಜನ ದುರ್ಮರಣ

ಟರ್ಕಿ ರಾಜಧಾನಿಯಲ್ಲಿ ಅಂಕರಾದಲ್ಲಿ ಆತ್ಮಾಹುತಿ ಕಾರ್‌‌ ಬಾಂಬ್‌ ಸ್ಫೋಟಗೊಂಡ ಪರಿಣಾಮ 34 ಜನರು ಸ್ಥಳದಲ್ಲಿ ಸಾವನ್ನಪ್ಪಿ, 120 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ...

ಅಂಕರಾ: ಟರ್ಕಿ ರಾಜಧಾನಿಯಲ್ಲಿ ಅಂಕರಾದಲ್ಲಿ ಆತ್ಮಾಹುತಿ ಕಾರ್‌‌ ಬಾಂಬ್‌ ಸ್ಫೋಟಗೊಂಡ ಪರಿಣಾಮ 34 ಜನರು ಸ್ಥಳದಲ್ಲಿ ಸಾವನ್ನಪ್ಪಿ, 120 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಟರ್ಕಿ ರಾಜಧಾನಿಯ ಹೃದಯಭಾಗದಲ್ಲಿರುವ ಸೇನಾ ಶಿಬಿರ ಗುರಿಯಾಗಿಟ್ಟುಕೊಂಡು ಈ ದಾಳಿ ನಡೆದಿದೆ ಎಂದು ವರದಿಯಾಗಿದ್ದು, ಸೇನಾ ವಾಹನಗಳ ಮೇಲೆ ಕಳೆದ ರಾತ್ರಿ ಬಾಂಬ್ ದಾಳಿ ನಡೆದಿದೆ ಎಂದು ಆರೋಗ್ಯ ಸಚಿವ ಮೆಹ್ಮತ್‌‌ ತಿಳಿಸಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ದಾಳಿಯಿಂದ ರಸ್ತೆಯಲ್ಲಿದ್ದ ಅನೇಕ ಬಸ್‌‌ಗಳು ಜಖಂ ಆಗಿವೆ.

ಅಂಕಾರದ ಟ್ರಾಫಿಕ್‌‌ ಸಿಗ್ನಲ್‌‌ನಲ್ಲಿ ಕಾರು ಬಾಂಬ್‌‌ ಸ್ಫೋಟಗೊಂಡಿದೆ. ಘಟನೆ ಸಂಭವಿಸುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಇದರ ದೃಶ್ಯಗಳು ಹರಿದಾಡುತ್ತಿದ್ದು, ಫೇಸ್‌ಬುಕ್‌‌ಗೆ ನಿರ್ಬಂಧ ಹೇರಲಾಗಿದೆ.  

ಉಗ್ರರು ಮತ್ತೆ ಬಾಂಬ್ ಸ್ಫೋಟಿಸುವ ಸೂಚನೆ ಇದ್ದು, ಜನ ಹೆಚ್ಚಾಗಿ ಗುಂಪು ಗೂಡದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಕಳೆದ 5 ತಿಂಗಳಲ್ಲಿ ನಡೆದ ಮೂರನೇ ಅತಿ ದೊಡ್ಡ ಬಾಂಬ್ ಸ್ಫೋಟ ಇದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

9 ದಿನಗಳಿಂದ ಉಪವಾಸ: ದೇವೇಂದ್ರ ಮಹ್ತೊ ಆಸ್ಪತ್ರೆಗೆ ದಾಖಲು; ಪೊಲೀಸರ ಲಾಠಿಚಾರ್ಚ್ ಖಂಡಿಸಿ ನಾಳೆ ಬಂದ್ ಗೆ BJP ಕರೆ!

ಶಾರುಖ್ ನಟನೆಯ 'ಕಭಿ ಅಲ್ವಿದಾ ನಾ ಕೆಹನಾ' ಚಿತ್ರ ಅಕ್ರಮ ಸಂಬಂಧ ಬೆಂಬಲಿಸಿಲ್ಲ: ಕರಣ್ ಜೋಹರ್ ಪೋಸ್ಟ್ ವೈರಲ್!

ಖಾತೆ ಹಂಚಿಕೆ ಕಸರತ್ತು: ವರಿಷ್ಠರಿಗೆ ಪಟ್ಟಿ ನೀಡಿ ಬೆಂಗಳೂರಿಗೆ CM ಡಿ.ಕೆ ಶಿವಕುಮಾರ್ ವಾಪಸ್; ಹೇಳಿದ್ದೇನು?

ನಾವು ಹಿಂಸಾಚಾರನ ಬೆಂಬಲಿಸಲ್ಲ; ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್‌ ಸರಿಯಲ್ಲ: ಜಾರ್ಖಂಡ್ ನಡೆ ಖಂಡಿಸಿದ ರಾಹುಲ್!

ಕೊಲಂಬಿಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಕನಿಷ್ಠ 47 ಮಂದಿ ಸಾವು, ಡಜನ್ಗಟ್ಟಲೆ ಕಟ್ಟಡಗಳು ಕುಸಿತ!