ವಿದೇಶ

ಸಾರ್ಕ್ ಸಾಮೂಹಿಕ ಶಕ್ತಿ ಪ್ರದರ್ಶನಕ್ಕೆ ಭಾರತ ಕರೆ

Srinivas Rao BV

ಪೊಖಾರಾ: ಸಾರ್ಕ್ ರಾಷ್ಟ್ರಗಳ ಸಚಿವರ ಪರಿಷತ್ ನ 37 ನೇ ಸಭೆಯಲ್ಲಿ ಭಾಗವಹಿಸಿ ಮಾತನಾಡಿರುವ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್, ಸಾರ್ಕ್ ರಾಷ್ಟ್ರಗಳ ಸಾಮೂಹಿಕ ಶಕ್ತಿ ಪ್ರಕಟಗೊಳಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಸಾರ್ಕ್ ಸಂಘಟನೆಯ ರಾಷ್ಟ್ರಗಳು ವೈಯಕ್ತಿಕವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆಯಾದರೂ, ಸಾಮೂಹಿಕ ಶಕ್ತಿಯನ್ನು ಪ್ರಕಟಿಸುವಲ್ಲಿ ಮತ್ತಷ್ಟು ಶ್ರಮ ಹಾಕಬೇಕಿದೆ. " ಎಸ್ಎಎಫ್ ಟಿಎ ಮೂಲಕ ನಮ್ಮ ಆರ್ಥಿಕತೆಯನ್ನು ಒಟ್ಟುಗೂಡಿಸಲು ಕೆಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ, ಈ ನಿರ್ಧಾರಗಳನ್ನು ಮುಂದಕ್ಕೆ ಕೊಂಡೊಯ್ಯುವ ಅಗತ್ಯವಿದೆ ಎಂದು ಸುಷ್ಮಾ ಸ್ವರಾಜ್ ಅಭಿಪ್ರಾಯಪಟ್ಟಿದ್ದಾರೆ.

ಬೆಳವಣಿಗೆಗೆ ದಕ್ಷಿಣ ಏಷ್ಯಾ ಪ್ರದೇಶ ಪ್ರಶಸ್ತವಾದ ತಾಣವಾಗುವ ಸಾಮರ್ಥ್ಯಹೊಂದಿದೆ ಆದರೆ ಸಾರ್ಕ್ ರಾಷ್ಟ್ರಗಳ(ದಕ್ಷಿಣ ಏಷ್ಯಾದ ಸ್ಥಳೀಯ ರಾಷ್ಟ್ರಗಳ) ಒಗ್ಗಟ್ಟು ಮತ್ತಷ್ಟು ಬಲಿಷ್ಠಗೊಳ್ಳಬೇಕಿದೆ. ಸಾರ್ಕ್ ರಾಷ್ಟ್ರಗಳು ಸಾಮೂಹಿಕ ಶಕ್ತಿ ಪ್ರಕಟಗೊಳಿಸುವ ಅಗತ್ಯವಿದೆ ಎಂದು ಸುಷ್ಮಾ ಸ್ವರಾಜ್ ಕರೆ ನೀಡಿದ್ದಾರೆ.

SCROLL FOR NEXT