ಫ್ಲೈದುಬೈ 
ವಿದೇಶ

ಫ್ಲೈದುಬೈ ವಿಮಾನ ದುರಂತ: 2 ಭಾರತೀಯರು ಸೇರಿ ಮೃತರ ಕುಟುಂಬಕ್ಕೆ 20 ಸಾವಿರ ಡಾಲರ್ ಪರಿಹಾರ

ಫ್ಲೈ ದುಬೈ ವಿಮಾನ ದುರಂತದಲ್ಲಿ ಮಡಿದವರಿಗಾಗಿ ಫ್ಲೈ ದುಬೈ ವಿಮಾನ ಸಂಸ್ಥೆ 20 ಸಾವಿರ ಡಾಲರ್ ಪರಿಹಾರ ನೀಡುವುದಾಗಿ ಘೋಷಿಸಿದೆ...

ದುಬೈ:  ಫ್ಲೈ ದುಬೈ ವಿಮಾನ ದುರಂತದಲ್ಲಿ ಮಡಿದವರಿಗಾಗಿ ಫ್ಲೈ ದುಬೈ ವಿಮಾನ ಸಂಸ್ಥೆ 20 ಸಾವಿರ ಡಾಲರ್ ಪರಿಹಾರ ನೀಡುವುದಾಗಿ ಘೋಷಿಸಿದೆ.

ಇಬ್ಬರು ಭಾರತೀಯರು ಸೇರಿ 62 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಫ್ಲೈದುಬೈ ವಿಮಾನ ರಷ್ಯಾದ ದಕ್ಷಿಣ ಭಾಗದಲ್ಲಿರುವ ರಾಸ್ಟೋವ್-ಆನ್-ಡಾನ್ ಪ್ರದೇಶದಲ್ಲಿ ಲ್ಯಾಂಡಿಗ್ ವೇಳೆ ಪತನವಾಗಿತ್ತು. ವಿಮಾನ ಪತನದಲ್ಲಿ ಮಡಿದ ಕುಟುಂಬಗಳನ್ನು ಸಂಪರ್ಕಿಸಿ ಅವರ ಕುಟುಂಬಕ್ಕೆ ಹಣದ ಸಹಾಯ ಮಾಡುವುದಾಗಿ ಸಂಸ್ಥೆ ಹೇಳಿದೆ.

ಫ್ಲೈ ದುಬೈ ವಿಮಾನ ಸಂಸ್ಥೆ ಪರಿಹಾರ ನೀಡುವ ನಿಮಿತ್ತ ಕಾರ್ಯಕ್ರಮವನ್ನು ಆಯೋಜಿಸಿ ಮೃತ ಕುಟುಂಬಕ್ಕೆ 20 ಸಾವಿರ ಡಾಲರ್ ಚೆಕ್ ನೀಡುವುದಾಗಿ ಹೇಳಿದೆ.

ಮಾಸ್ಕೋ ಕಾಲಮಾನ ಪ್ರಕಾರ ಶನಿವಾರ ಬೆಳಗ್ಗೆ 3.30ರ ಸುಮಾರಿಗೆ ಎರಡನೇ ಸಹ ಲ್ಯಾಂಡಿಂಗ್ ಮಾಡುವ ವೇಳೆ ರನ್ ವೇ ಸಿಗದೆ ನೆಲಕ್ಕೆ ಅಪ್ಪಳಿಸಿತ್ತು. ನೆಲಕ್ಕಪ್ಪಳಿಸಿದ ರಭಸಕ್ಕೆ ವಿಮಾನ ತುಂಡು ತುಂಡಾಗಿದ್ದವು. ಇನ್ನು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 7 ಮಂದಿ ವಿಮಾನ ಸಿಬ್ಬಂದಿ ಸೇರಿ 55 ಪ್ರಯಾಣಿಕರು ಮೃತಪಟ್ಟಿದ್ದರು.

ಮೃತರ ಪೈಕಿ 44 ಮಂದಿ ರಷ್ಯಾದವರಾಗಿದ್ದು, 8 ಮಂದಿ ಉಕ್ರೇನ್, ಇಬ್ಬರು ಭಾರತೀಯರು ಹಾಗೂ ಓರ್ವ ಉಜ್ಬೇಕಿಸ್ತಾನದವರು ಮೃತಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಶಾಸನಬದ್ಧ ಕಾರ್ಯವಿಧಾನ ಅನುಸರಿಸದೆ ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡುವಂತಿಲ್ಲ: ಚುನಾವಣಾ ಆಯೋಗದ ವಿರುದ್ಧ ಹೈಕೋರ್ಟ್ ಕೆಂಡ..!

Flydubai ವಿಮಾನ ಹೈಜಾಕ್'ಗೆ ಯತ್ನ; ಕಾಕ್‌ಪಿಟ್‌ನಲ್ಲೇ ಡೆಡ್ಲಿ ಫೈಟ್; 174 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಸಾಹಸಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ..!

ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಬಿಸಿ: ವಾಣಿಜ್ಯ ಸಿಲಿಂಡರ್ ಬೆಲೆ 62.50 ರೂ. ಹೆಚ್ಚಳ, ವಿಮಾನ ಇಂಧನವೂ ದುಬಾರಿ..!

ಕಾಂಗ್ರೆಸ್‌ನಲ್ಲಿ ಮತ್ತೆ ಸಂಪುಟ ಸರ್ಕಸ್: ದೆಹಲಿಯಲ್ಲಿ ವೇಣುಗೋಪಾಲ್ ಭೇಟಿಯಾದ ಸಿದ್ದರಾಮಯ್ಯ, ಖಾಲಿ ಇರೋ 2 ಸಚಿವ ಸ್ಥಾನ ಭರ್ತಿಗೆ ಪಟ್ಟು..!

ಡಿಕೆಶಿ ಕನಸಿನ ಅವಳಿ ಸುರಂಗ ಮಾರ್ಗಕ್ಕೆ ಹೊಸ ಕಂಟಕ: ಹೆಬ್ಬಾಳ ಕೆರೆಯ 3.45 ಎಕರೆ ಜೌಗು ಪ್ರದೇಶ ನಾಶಕ್ಕೆ ಯತ್ನ, ಎದುರಾಯ್ತು ಕಾನೂನು ಸಂಕಷ್ಟ..!