ವಿದೇಶ

ಬೆಲ್ಜಿಯಂ ಸರಣಿ ಸ್ಫೋಟ: ಆತ್ಮಾಹುತಿ ದಾಳಿಕೋರರ ಚಿತ್ರ ಬಿಡುಗಡೆ

Lingaraj Badiger
ಬ್ರುಸೆಲ್ಸ್: ಬೆಲ್ಜಿಯಂ ರಾಜಧಾನಿ ಬ್ರುಸೆಲ್ಸ್ ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಸರಣಿ ಬಾಂಬ್ ಸ್ಫೋಟಿಸಿದ ಇಬ್ಬರು ಶಂಕಿತ ಆತ್ಮಾಹುತಿ ಬಾಂಬ್ ದಾಳಿಕೋರರ ಚಿತ್ರಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಬ್ರುಸೆಲ್ಸ್ ಪೊಲೀಸರ ಪ್ರಕಾರ, ಶಂಕಿತ ಉಗ್ರರನ್ನು ನಜಿಮ್ ಲಾಚ್ರೋಯಿ ಮತ್ತು ಮೊಹಮ್ಮದ್ ಅಬ್ರಿನಿ ಎಂದು ಗುರುತಿಸಲಾಗಿದ್ದು, ಅವರ ಫೋಟೋಗಳನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಲಾಗಿದೆ.
ಇಂದು ಬೆಳಗ್ಗೆ ಸಂಭವಿಸಿದ ಸರಣಿ ಸ್ಫೋಟದಲ್ಲಿ 27 ಮಂದಿ ಮೃತಪಟ್ಟಿದ್ದು, ಇಬ್ಬರು ಭಾರತೀಯರು ಸೇರಿದಂತೆ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಝಾವೆಂಟಮ್ ವಿಮಾನ ನಿಲ್ದಾಣದ ಡಿಪಾರ್ಚರ್ ಹಾಲ್ ನಲ್ಲಿ ಮೊದಲ ಸ್ಫೋಟದ ಶಬ್ದ ಕೇಳಿಬಂದಿದ್ದು. 2 ಬಾಂಬ್‌ಗಳು ಮೊದಲು  ಡಿಪಾರ್ಚರ್‌ ಟರ್ಮಿನಲ್‌ನ ಹೊರಭಾಗದಲ್ಲಿ ಸ್ಫೋಟಗೊಂಡಿದ್ದರೆ,ಕೆಲ ಹೊತ್ತಿನ ಬಳಿಕ ಇನ್ನೊಂದು ಬಾಂಬ್‌ ಮೆಟ್ರೋ ರೈಲು ನಿಲ್ದಾಣದಲ್ಲಿ ಸ್ಫೋಟಗೊಂಡಿದೆ. ತಪಾಸಣೆಯ ವೇಳೆ ಇನ್ನೂ ಕೆಲ ಬಾಂಬ್‌ಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.
SCROLL FOR NEXT