ಲಂಡನ್: ಅಮೆರಿಕಾದ ತನಿಖಾ ಸಂಸ್ಥೆ ಎಫ್ ಬಿ ಐ, 2014 ರಲ್ಲಿ ಸ್ಯಾನ್ ಬರ್ನಾರ್ಡಿನೋ ಮೇಲೆ ಗುಂಡಿನ ದಾಳಿ ನಡೆಸಿದ್ದ ದಾಳಿಕೋರನ ಐಫೋನ್ ಅನ್ಲಾಕ್ ಮಾಡಲು ಯಶಸ್ವಿಯಾಗಿದೆ ಎಂದು ತಿಳಿಸಿದೆ. ಈ ಫೋನ್ ನ ಉತ್ಪಾದಕ 'ಆಪಲ್' ಸಂಸ್ಥೆ ತಮ್ಮ ಗ್ರಾಹಕರ ಭದ್ರತೆಯನ್ನು ಭೇದಿಸಲು ನಿರಾಕರಿಸಿತ್ತು.
ಡಿಜಿಟಲ್ ಖಾಸಗಿತನದ ಮೇಲೆ ಅಮೇರಿಕಾ ಸರ್ಕಾರ ಮತ್ತು ಸಿಲಿಕಾನ್ ವ್ಯಾಲಿಯ ನಡುವಿನ ಎರಡು ವರ್ಷದ ಘರ್ಷಣೆಯಲ್ಲಿ ಇದು ಮಹತ್ವದ ಬೆಳವಣಿಗೆ ಎಂದಿದೆ ಗಾರ್ಡಿಯನ್ ಪತ್ರಿಕೆ.
ಸ್ಯಾನ್ ಬೆರ್ನಾಡಿನೋದಲ್ಲಿ ದಾಳಿ ಮಾಡಿದ್ದ ಬಂಧೂಕುಧಾರಿ ಸಯ್ಯದ್ ಫಾರೂಕ್ ಅವರ ಐಫೋನನ್ನು ಭೇದಿಸಲು ಸರ್ಕಾರಕ್ಕೆ ಸಹಾಯ ಮಾಡುವಂತೆ 'ಆಪಲ್' ಸಂಸ್ಥೆಗೆ ನೀಡಿದ್ದ ಹಿಂದಿನ ಆದೇಶಕ್ಕೆ ಅಮೇರಿಕಾ ಮೆಜೆಸ್ಟ್ರೇಟ್ ನ್ಯಾಯಾಧೀಶ ಷೇರಿ ಪಿಮ್ ಸೋಮವಾರ ತಡೆ ನೀಡಿದ್ದಾರೆ.
ಐಫೋನ್ ಗಳನ್ನು ಭೇದಿಸಲು ಅನ್ಯ ಮಾರ್ಗ ಇದ್ದೇ ಇರುತ್ತದೆ ಎಂದು ನ್ಯಾಯಾಲಯ ಇಲಾಖೆ ಸಲ್ಲಿಸಿದ್ದ ತನ್ನ ಅರ್ಜಿಯಲ್ಲಿ ತಿಳಿಸಿತ್ತು. ಆದರೆ ಐಫೋನ್ ಗಳನ್ನು ಭೇದಿಸಲು 'ಆಪಲ್' ಸಂಸ್ಥೆಗೆ ಮಾತ್ರ ಸಾಧ್ಯ ಎಂಬುದು ಸರ್ಕಾರದ ವಾದವಾಗಿತ್ತು.