ವಿದೇಶ

ಬ್ರಸೆಲ್ಸ್‌ ವಿಮಾನ ನಿಲ್ದಾಣದ ದಾಳಿಕೋರರಿಗೂ ಪ್ಯಾರಿಸ್ ದಾಳಿಗೂ ನಂಟು

Lingaraj Badiger
ಬ್ರಸೆಲ್ಸ್‌ : ಬೆಲ್ಜಿಯಂ ರಾಜಧಾನಿ ಬ್ರುಸೆಲ್ಸ್ ನಲ್ಲಿ ಮಂಗಳವಾರ ಸಂಭವಿಸಿದ ಸರಣಿ ಬಾಂಬ್ ಸ್ಫೋಟದ ದಾಳಿಕೋರರನ್ನು ಬೆಲ್ಜಿಯಂ ಪೊಲೀಸರು ಗುರುತಿಸಿದ್ದು, ಆತ್ಮಾಹುತಿ ದಾಳಿ ನಡೆಸಿದ ಇಬ್ಬರು ಸಹೋದರರು ಕಳೆದ ವರ್ಷಾಂತ್ಯ ನಡೆದಿದ್ದ ಪ್ಯಾರಿಸ್‌ ದಾಳಿಯೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಗೊತ್ತಾಗಿದೆ.
ನಿನ್ನೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ ಇಬ್ಬರು ಸಹೋದರರನ್ನು ಖಾಲಿದ್‌ ಮತ್ತು ಬ್ರಾಹಿಂ ಅಲ್‌ ಬಕ್‌ರೂಯಿ ಎಂದು ಗುರುತಿಸಲಾಗಿದೆ ಎಂದು ಸರಕಾರಿ ವಾರ್ತಾ ಪ್ರಸಾರ ಸಂಸ್ಥೆ ಆರ್‌ಟಿಬಿಎಫ್ ವರದಿ ಮಾಡಿದೆ.
ಈ ಸಹೋದರರು ಹಿಂದೆ ನಡೆಸಿದ್ದ ಕೆಲವು ಅಪರಾಧಗಳಿಂದಾಗಿ ಪೊಲೀಸರಿಗೆ ಪರಿಚಿತರೇ ಆಗಿದ್ದಾರೆ. ಆದರೆ ಇವರು ಈ ಮೊದಲು ಯಾವುದೇ ಭಯೋತ್ಪಾದಕ ಕೃತ್ಯ ಎಸಗಿದವರಲ್ಲ ಎನ್ನಲಾಗಿದೆ.
ಖಾಲಿದ್‌ ಅಲ್‌ ಬಕ್‌ರೂಯಿ ಬಾಡಿಗೆ ಅಪಾರ್ಟ್‌ಮೆಂಟ್‌ ಒಂದರಲ್ಲಿ ವಾಸಿಸಿಕೊಂಡಿದ್ದ. ಕಳೆದ ವಾರ ಈತನ ಮನೆಗೆ ಪೊಲೀಸರು ದಾಳಿ ನಡೆಸಿದ್ದರು. ಪರಿಣಾಮವಾಗಿ ಅವರಿಗೆ ಕಳೆದ ವರ್ಷಾಂತ್ಯ ನಡೆದಿದ್ದ ಪ್ಯಾರಿಸ್‌ ಭಯೋತ್ಪಾದಕ ದಾಳಿಯ ಪ್ರಧಾನ ಶಂಕಿತ ಸಲಾಹ್‌ ಅಬ್ಧೆಸ್ಲಾಮ್‌ ನನ್ನು ಸೆರೆ ಹಿಡಿಯಲು ಸಾಧ್ಯವಾಗಿತ್ತು.
SCROLL FOR NEXT