ವಿದೇಶ

ಬಾಂಗ್ಲಾದಲ್ಲಿ ಕ್ರೈಸ್ತ ಧರ್ಮೀಯನ ಹತ್ಯೆ, ಉಳಿದವರಿಗೆ ಎಚ್ಚರಿಕೆ: ಹೊಣೆ ಹೊತ್ತ ಇಸೀಸ್

Srinivas Rao BV
ಢಾಕಾ: ಬಾಂಗ್ಲಾ ದೇಶದಲ್ಲಿ ಇತ್ತೀಚೆಗೆ ನಡೆದಿದ್ದ ಕ್ರೈಸ್ತ ಧರ್ಮೀಯಯೊಬ್ಬರ ಹತ್ಯೆಗೆ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಹೊಣೆ ಹೊತ್ತಿದ್ದು, ಕ್ರೈಸ್ತ ವ್ಯಕ್ತಿಯ ಹತ್ಯೆ ಇತರರಿಗೆ ಪಾಠ ಎಂದು ಎಚ್ಚರಿಸಿದೆ. 
ಬಾಂಗ್ಲಾದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಹಾಗೂ ಧಾರ್ಮಿಕ ಉದಾರವಾದಿಗಳ ಹತ್ಯೆ ಹೆಚ್ಚಾಗುತ್ತಿದ್ದು ಇಸ್ಲಾಮಿಕ್ ಉಗ್ರ ಸಂಘಟನೆಗಳು ಇದರ ಹಿಂದಿವೆ ಎಂದು ಶಂಕಿಸಲಾಗಿದೆ. ಇತ್ತೀಚೆಗೆ ಇಸ್ಲಾಂ ನಿಂದ ಕ್ರೈಸ್ತ ಮತಕ್ಕೆ ಮತಾಂತರಗೊಂಡಿದ್ದ ವ್ಯಕ್ತಿಯೊಬ್ಬನ ಹತ್ಯೆ ನಡೆದಿತ್ತು. ಈ ಹತ್ಯೆಯ ಹೊಣೆಯನ್ನು ಇಸ್ಲಾಮಿಕ್ ಉಗ್ರ ಸಂಘಟನೆ ಹೊತ್ತಿದ್ದು, ಇದು ಇತರರಿಗೆ ಪಾಠವಾಗಲಿ ಎಂದು ಎಚ್ಚರಿಕೆ ನೀಡಿದೆ. 
ಅಮೆರಿಕ ಮೂಲದ ಎಸ್ ಐಟಿಇ ಗುಪ್ತಚರ ಇಲಾಖೆ ಬಾಂಗ್ಲಾದೇಶದಲ್ಲಿ ನಡೆದ ಹತ್ಯೆಯ ಬಗ್ಗೆ ಹೇಳಿಕೆ ನೀಡಿದ್ದು, ಉತ್ತರ ಢಾಕಾದಲ್ಲಿ ನಡೆದ ಹುಸೇನ್ ಸರ್ಕಾರ್ ಹತ್ಯೆಗೆ ಇಸ್ಲಾಮಿಕ್ ಉಗ್ರ ಸಂಘಟನೆ ಹೊಣೆ ಹೊತ್ತಿದೆ ಎಂದು ಹೇಳಿದೆ. ಇದಕ್ಕೆ ಪೂರಕವಾಗಿ ಇಸ್ಲಾಮಿಕ್ ಉಗ್ರ ಸಂಘಟನೆಯ ಟ್ವಿಟರ್ ಖಾತೆಯಲ್ಲಿ ಮತಾಂತರಗೊಂಡಿದ್ದ ಮುಸ್ಲಿಂ ವ್ಯಕ್ತಿಯ ಹತ್ಯೆಯ ಬಗ್ಗೆ ಇಸೀಸ್ ಟ್ವೀಟ್ ಮಾಡಿದ್ದು ಉಳಿದವರಿಗೆ ಎಚ್ಚರಿಕೆ ನೀಡಿದೆ. 
ಹತ್ಯೆಗೀಡಾದ ವ್ಯಕ್ತಿ 1999 ರಲ್ಲಿ ಇಸ್ಲಾಂ ನಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು, ಆದರೆ ಕ್ರೈಸ್ತ ಧರ್ಮದ ಪ್ರಚಾರದಲ್ಲಿ ತೊಡಗಿರಲಿಲ್ಲ ಎಂದು ಬಾಂಗ್ಲಾ ಪೊಲೀಸರು ತಿಳಿಸಿದ್ದಾರೆ.
SCROLL FOR NEXT