ಮುಸ್ತಾಫಾ ಜತೆ ಬೆಂಜಮಿನ್ ಇನ್ಸ್ (ಕೃಪೆ: ಟ್ವಿಟರ್)
ಲಂಡನ್: ಮಂಗಳವಾರ ಸೈಪ್ರಸ್ ನಲ್ಲಿ ಈಜಿಪ್ಟ್‌ಏರ್ ವಿಮಾನವನ್ನು ಅಪಹರಣ ಮಾಡಿದ ವ್ಯಕ್ತಿಯೊಂದಿಗೆ ಅಪಹೃತನೊಬ್ಬ ಕ್ಲಿಕ್ಕಿಸಿದ ಸೆಲ್ಫಿ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ಸೈಫ್ ಈದಿನ್ ಮುಸ್ತಾಫಾ ಎಂಬಾತ ಮಂಗಳವಾರ 56 ಪ್ರಯಾಣಿಕರಿರುವ ಈಜಿಪ್ಟ್‌ಏರ್ ಎಂಎಸ್ 181 ವಿಮಾನವನ್ನು ಅಪಹರಣ ಮಾಡಿದ್ದನು.
ಈ ವೇಳೆ ಆ ವಿಮಾನದಲ್ಲಿದ್ದ ಅಪಹೃತ ಬ್ರಿಟಿಷ್ ಪ್ರಜೆ ಬೆಂಜಮಿನ್ ಇನ್ಸ್ ಎಂಬಾತ ಮುಸ್ತಾಫಾ ಜತೆ ಸೆಲ್ಫಿ ಕ್ಲಿಕ್ಕಿಸಿದ್ದಾನೆ.
ತಮ್ಮ ಮಾಜಿ ಪತ್ನಿಯನ್ನು ಭೇಟಿಯಾಗುವುದಕ್ಕಾಗಿ ಮುಸ್ತಾಫಾ ವಿಮಾನವನ್ನೇ ಅಪಹರಣ ಮಾಡಿದ್ದು, ಕೆಲವು ಗಂಟೆಗಳ ಕಾಲ ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿ ಮಾಡಿ ಡ್ರಾಮಾ ಸೃಷ್ಟಿಸಿದ್ದನು. ಈ ವೇಳೆ ಆತನೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ಬೆಂಜಮಿನ್, ಆ ಫೋಟೋವನ್ನು ತನ್ನ ಸ್ನೇಹಿತರಿಗೆ ಕಳಹಿಸಿಕೊಟ್ಟಿದ್ದಾರೆ.
ಈ ಫೋಟೋ ಈಗ ಟ್ವಿಟರ್‌ನಲ್ಲಿ ಹರಿದಾಡಿದ್ದು ನೆಟಿಜನ್‌ಗಳು ಇದನ್ನು ಡೇರಿಂಗ್ ಸೆಲ್ಫಿ ಎಂದು ಕರೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics