ಬೀಜಿಂಗ್: ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಡೊನಾಲ್ಡ್ ಟ್ರಂಪ್ ಹಾಗೂ ಹಿಲರಿ ಕ್ಲಿಂಟನ್ ಪೈಕಿ ಚೀನಾದಲ್ಲಿ ಡೊನಾಲ್ಡ್ ಟ್ರಂಪ್ ಅವರೇ ಹೆಚ್ಚು ಜನಪ್ರಿಯ ವ್ಯಕ್ತಿಯಂತೆ.
ಇತ್ತೀಚೆಗೆ ನಡೆದ ಸಮೀಕ್ಷೆಯೊಂದರ ವರದಿಯ ಪ್ರಕಾರ ಚೀನಾದಲ್ಲಿ ಡೊನಾಲ್ಡ್ ಟ್ರಂಪ್ ಕ್ಲಿಂಟನ್ ಗಿಂತ ಹೆಚ್ಚು ಜನಪ್ರಿಯತೆ ಗಳಿಸಿದ್ದಾರಂತೆ. ಡೊನಾಲ್ಡ್ ಟ್ರಂಪ್ ತಮ್ಮ ಭಾಷಣದಲ್ಲಿ ಅಮೆರಿಕದ ಆರ್ಥಿಕ ಸಂಕಷ್ಟಕ್ಕೆ ಚೀನಾವನ್ನು ಹೊಣೆಯನ್ನಾಗಿ ಮಾಡಿದ್ದರು. ಆದರೆ ಚೀನಾದ ಶೇ.54 ರಷ್ಟು ಮಂದಿ ಇದೇ ಡೊನಾಲ್ಡ್ ಟ್ರಂಪ್ ಪರವಾಗಿದ್ದಾರೆ ಎಂದು ಸಮೀಕ್ಷೆ ವರದಿ ತಿಳಿಸಿರುವುದನ್ನು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
ಡೊನಾಲ್ಡ್ ಟ್ರಂಪ್ ಓರ್ವ ಉದ್ಯಮಿ, ಅವರು ಅಮೆರಿಕ ಆರ್ಥಿಕ ಸಮಸ್ಯೆಗಳಿಗೆ ಚೀನಾವನ್ನು ವಿನಾಕಾರಣ ನಿಂದಿಸುತ್ತಾರೆ ಎಂದು ಚೀನಾದ ಆರ್ಥಿಕ ತಜ್ಞ ಲಿ ಫು ಹೇಳಿದ್ದಾರೆ. ಹಿಲರಿ ಕ್ಲಿಂಟನ್ ಹಾಗೂ ಡೊನಾಲ್ಡ್ ಟ್ರಂಪ್ ನಡುವಿನ ಜನಪ್ರಿಯತೆ ಕುರಿತು ವೆಬ್ ಸೈಟ್ ಮೂಲಕ ಸಮೀಕ್ಷೆ ನಡೆಸಲಾಗಿದೆ.