ಸುಕಿ 
ವಿದೇಶ

ಸುಕಿ ಮ್ಯಾನ್ಮಾರ್​ ನೂತನ ವಿದೇಶಾಂಗ ಸಚಿವೆ

ಮ್ಯಾನ್ಮಾರ್​ನ ಆಡಳಿತಾರೂಢ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರೆಸಿ (ಎನ್​ಎಲ್​ಡಿ) ಅಧ್ಯಕ್ಷೆ ಅಂಗ್ ಸಾನ್ ಸು ಕೀ ಅವರು ಬುಧವಾರ...

ನೇಪಿಡಾ: ಮ್ಯಾನ್ಮಾರ್​ನ ಆಡಳಿತಾರೂಢ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರೆಸಿ (ಎನ್​ಎಲ್​ಡಿ) ಅಧ್ಯಕ್ಷೆ ಅಂಗ್ ಸಾನ್ ಸು ಕೀ ಅವರು ಬುಧವಾರ ದೇಶದ ನೂತನ ವಿದೇಶಾಂಗ ವ್ಯವಹಾರಗಳ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದರು. 
ಸುಕಿ ಅವರ ಆಪ್ತ ಯು ಟಿನ್ ಕ್ಯಾವ್ ಅವರು ಇಂದು ಮ್ಯಾನ್ಮಾರ್ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಕ್ಯಾವ್ ನೇತೃತ್ವದ ನೂತನ ಸರ್ಕಾರದಲ್ಲಿ ಸುಕಿ ಅವರು ವಿದೇಶಾಂಗ ಖಾತೆಯೊಂದಿಗೆ ಇತರೆ ಮೂರು ಖಾತೆಗಳನ್ನೂ ಹೊಂದಿರುತ್ತಾರೆ ಎಂದು ವರದಿ ಮಾಡಲಾಗಿದೆ.
ಸುಕಿ ನೇಮಕಾತಿಯನ್ನು ಯೂನಿಯನ್ ಪಾರ್ಲಿಮೆಂಟ್​ನ ಸ್ಪೀಕರ್ ಯು ಮಾನ್ ವಿನ್ ಖೈಂಗ್ ತಾನ್ ಅವರು ಸರ್ಕಾರ ಸಂಪುಟದ ಪ್ರಮಾಣವಚನ ಸಮಾರಂಭದಲ್ಲಿ ಪ್ರಕಟಿಸಿದರು. ಅಧ್ಯಕ್ಷರ ಕಚೇರಿ ಸಚಿವಾಲಯ, ಶಿಕ್ಷಣ ಸಚಿವಾಲಯ ಮತ್ತು ವಿದ್ಯುತ್ ಮತ್ತು ಇಂಧನ ಸಚಿವಾಲಯ ಈ ಮೂರು ಸಚಿವಾಲಯಗಳ ನೇತೃತ್ವವನ್ನೂ ಅಂಗ್ ಸಾನ್ ಸು ಕಿ ಅವರಿಗೆ ವಹಿಸಲು ಯೂನಿಯನ್ ಪಾರ್ಲಿಮೆಂಟ್ ಅನುಮೋದನೆ ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಿತ್ರ..., My Friend... ಎನ್ನುತ್ತಲೇ ಭಾರತದ ಬೆನ್ನಿಗೆ ಚೂರಿ!; US ಸೇನೆ ಜೊತೆ ನಂಟು ಹೊಂದಿದ್ದ ವ್ಯಕ್ತಿ ಈಶಾನ್ಯ ರಾಜ್ಯದಲ್ಲಿ; ದೇಶದ ವಿರುದ್ಧ ಸಂಚು!

ರಾಜ್ಯಾದ್ಯಂತ ಮಳೆ ಆರ್ಭಟ: ಬೆಂಗಳೂರು ಹೈರಾಣ, ಇನ್ನೂ 3 ದಿನ ಮಳೆ ಸಾಧ್ಯತೆ!

'ಭಾರತ ಆಪ್ತ ಸ್ನೆಹಿತ', 'ಪಾಕಿಸ್ತಾನಕ್ಕೆ ತುಂಬಾ ಕೆಟ್ಟದಾಗಿರುತ್ತದೆ': ಆಫ್ಘನ್ ಕ್ರಿಕೆಟಿಗ Allah Ghazanfar ಎಚ್ಚರಿಕೆ

ಲವ್ ಅಲ್ಲ ಅದು 'ಬಲವಂತದ ಮದುವೆ': ಕಾಂಗ್ರೆಸ್‌ ಜತೆ ವಿಚ್ಛೇದನಕ್ಕೆ ಕಾರಣ ಬಿಚ್ಚಿಟ್ಟ ದೇವೇಗೌಡ!

'ಅಶ್ಲೀಲ ಅಲ್ಲ, ಹಾಡನ್ನು Rewrite ಮಾಡ್ತೇನೆ': ನಿರ್ದೇಶಕ Prem ಕ್ಷಮೆಯಾಚನೆ! ನಟಿ ನೋರಾ, ಸಾಹಿತಿ ಅಲಂ ಬಗ್ಗೆಯೂ ಕಿಡಿ! Video

SCROLL FOR NEXT