ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ನಾಪತ್ತೆಯಾಗಿದ್ದ ಈಜಿಪ್ಟ್​ ವಿಮಾನ ಪತನ, 66 ಮಂದಿ ಸಾವು

ನಾಪತ್ತೆಯಾಗಿದ್ದ ಈಜಿಪ್ಟ್ ಏರ್ ವಿಮಾನ ಮೆಡಿಟರೇನಿಯನ್ ಸಮುದ್ರದಲ್ಲಿ ಪತನವಾಗಿದೆ ಎಂದು ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ...

ಸಾಂದರ್ಭಿಕ ಚಿತ್ರ
Lingaraj Badiger
Updated On : 19 May 2016, 6:17 am
ಕೈರೋ: ನಾಪತ್ತೆಯಾಗಿದ್ದ ಈಜಿಪ್ಟ್ ಏರ್ ವಿಮಾನ ಮೆಡಿಟರೇನಿಯನ್ ಸಮುದ್ರದಲ್ಲಿ ಪತನವಾಗಿದೆ ಎಂದು ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ ಅವರು ಗುರುವಾರ ಖಚಿತಪಡಿಸಿದ್ದಾರೆ. 
ಪ್ಯಾರಿಸ್‌ನಿಂದ ಕೈರೋಗೆ ಹಾರುತ್ತಿದ್ದ ಈಜಿಪ್ಟ್ ಏರ್‌ ವಿಮಾನ ಪೂರ್ವ ಮೆಡಿಟರೇನಿಯ ಸಮುದ್ರದಲ್ಲಿ ಪತನವಾಗಿದ್ದು, ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ 66 ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಇಂದು ಬೆಳಗಿನ ಜಾವ ವಿಮಾನವು ಮೆಡಿಟರೇನಿಯನ್ ಸಮುದ್ರದ ಮೇಲೆ 37 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ರೆಡಾರ್​ನಿಂದ ಸಂಪರ್ಕ ಕಡಿದುಕೊಂಡಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಈಜಿಪ್ಟ್ ವಿಮಾನ ಪತನವಾಗಿರುವುದನ್ನು ಖಚಿತಪಡಿಸಲಾಗಿದ್ದು, ವಿಮಾನದ ಅವಶೇಷಗಳಿಗಾಗಿ ಶೋಧ ನಡೆಯುತ್ತಿದೆ.

Advertisement

Advertisement

ವಿಮಾನ ತಾಂತ್ರಿಕ ಕಾರಣದಿಂದ ಪತನವಾಗಿರಬಹುದು ಅಥವಾ ಉಗ್ರರು ಹೊಡೆದುರುಳಿಸಿರುವ ಸಾಧ್ಯತೆ ಸಹ ಇದೆ. ಆದರೆ ಈಗಲೇ ಯಾವುದೇ ನಿರ್ಣಯಕ್ಕೆ ಬರಲು ಸಾಧ್ಯವಿಲ್ಲ, ತನಿಖೆಯ ನಂತರ ಸತ್ಯ ಹೊರಬರಲಿದೆ ಎಂದು ಈಜಿಪ್ಟ್​ನ ಪ್ರಧಾನಿ ಷರೀಫ್ ಇಸ್ಮಾಯಿಲ್ ತಿಳಿಸಿದ್ದಾರೆ.
ವಿಮಾನದಲ್ಲಿ 56 ಪ್ರಯಾಣಿಕರು ಮತ್ತು 10 ಸಿಬ್ಬಂದಿ ಪ್ರಯಾಣಿಸುತ್ತಿದ್ದರು. ಈಜಿಪ್ಟ್​ನ 30 ಜನ, ಫ್ರಾನ್ಸ್​ನ 15, ಇಬ್ಬರು ಇರಾಕಿ ನಾಗರಿಕರು ಮತ್ತು ಬ್ರಿಟನ್, ಬೆಲ್ಜಿಯಂ, ಕುವೈತ್, ಸೌದಿ ಅರೇಬಿಯಾ, ಸುಡಾನ್, ಚಾದ್, ಪೋರ್ಚುಗಲ್, ಅಲ್ಜೀರಿಯಾದ ಮತ್ತು ಕೆನಡಾದ ಒಬ್ಬರು ಪ್ರಯಾಣಿಸುತ್ತಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments