ಎನ್ ಎಸ್ ಜಿ 
ವಿದೇಶ

ಎನ್ ಎಸ್ ಜಿ ಸದಸ್ಯತ್ವ ಶಸ್ತ್ರಾಸ್ತ್ರಗಳ ಪೈಪೋಟಿಗೆ ಸಂಬಂಧಿಸಿದ್ದಲ್ಲ: ಪಾಕಿಸ್ತಾನಕ್ಕೆ ಅಮೆರಿಕ

ಪರಮಾಣು ಪೂರೈಕೆ ಸಮೂಹ (ಎನ್ ಎಸ್ ಜಿ) ಕ್ಕೆ ಭಾರತ ಸೇರ್ಪಡೆಗೊಳ್ಳಲು ಪಾಕಿಸ್ತಾನ ವಿರೋಧಿಸಿರುವುದಕ್ಕೆ ಅಮೆರಿಕ ತನ್ನ ಅಸಮಾಧಾನವನ್ನು ಸ್ಪಷ್ಟವಾಗಿ ಬಹಿರಂಗಪಡಿಸಿದೆ.

ವಾಷಿಂಗ್ ಟನ್: ಪರಮಾಣು ಪೂರೈಕೆ ಸಮೂಹ (ಎನ್ ಎಸ್ ಜಿ) ಕ್ಕೆ ಭಾರತ ಸೇರ್ಪಡೆಗೊಳ್ಳಲು ಪಾಕಿಸ್ತಾನ ವಿರೋಧಿಸಿರುವುದಕ್ಕೆ ಅಮೆರಿಕ ತನ್ನ ಅಸಮಾಧಾನವನ್ನು ಸ್ಪಷ್ಟವಾಗಿ ಬಹಿರಂಗಪಡಿಸಿದೆ.
ಎನ್ ಎಸ್ ಜಿ ಸದಸ್ಯತ್ವ  ಅಣುಶಕ್ತಿಯನ್ನು ನಾಗರಿಕರ ಬಳಕೆ ಮಾಡುವುದಕ್ಕೆ ಸಂಬಂಧಿಸಿದ್ದೇ ಹೊರತು ಶಸ್ತ್ರಾಸ್ತ್ರಗಳ ಪೈಪೋಟಿಗೆ ಸಂಬಂಧಪಟ್ಟ ವಿಷಯವಲ್ಲ. ಇದನ್ನು ಪಾಕಿಸ್ತಾನ ಅರ್ಥ ಮಾಡಿಕೊಳ್ಳಬೇಕು ಎಂದು ಅಮೆರಿಕದ ಉಪವಕ್ತಾರ ಮಾರ್ಕ್ ಟೋನರ್ ಹೇಳಿದ್ದಾರೆ.
ಭಾರತದ ಸದಸ್ಯತ್ವಕ್ಕೆ ಪಾಕಿಸ್ತಾನ ವಿರೋಧ ವ್ಯಕ್ತಪಡಿಸುತ್ತಿರುವುದರ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, ಭಾರತ ಪರಮಾಣು ಪೂರೈಕೆ ಸಮೂಹಕ್ಕೆ ಸೇರಲು ಎಲ್ಲಾ ರೀತಿಯ ಅರ್ಹತೆ ಹೊಂದಿದೆ ಎಂದು ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಬರಾಕ್ ಒಬಾಮ ಹೇಳಿದ್ದರು. ಈ ಬಗ್ಗೆ  ಸದಸ್ಯ ರಾಷ್ಟ್ರಗಳ ನಡುವೆ ಸಾಕಷ್ಟು ಚರ್ಚೆಗಳು ನಡೆದಿವೆ ಎಂದು ಟೋನರ್ ತಿಳಿಸಿದ್ದಾರೆ.
ಮುಂದಿನ ಎನ್ ಎಸ್ ಜಿ ಸಭೆ ಹೊಸ ಸದಸ್ಯ ರಾಷ್ಟ್ರಗಳ ನೇಮಕಕ್ಕೆ ಸಂಬಂಧಿಸಿದಂತೆ ಆಯೋಜಿಸಲ್ಲಾಗಿಲ್ಲ, ಅದೊಂದು ಸಾಮಾನ್ಯ ಸಭೆಯಾಗಿರಲಿದೆ ಎಂದು ಮಾರ್ಕ್ ಟೋನರ್ ಹೇಳಿದ್ದಾರೆ. ಭಾರತಕ್ಕೆ ಎನ್ ಎಸ್ ಜಿ ಸದಸ್ಯತ್ವ ನೀಡುವ ವಿಚಾರದಲ್ಲಿ ಪಾಕಿಸ್ತಾನ ತನ್ನ ನಿಲುವನ್ನು ಬಹಿರಂಗಪಡಿಸಿದೆ. ಯಾವುದೇ ರಾಷ್ಟ್ರವಾದರೂ ಎನ್ ಎಸ್ ಜಿ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಬಹುದು. ರಾಷ್ಟ್ರಗಳ ಅರ್ಹತೆ ಕುರಿತು ಚರ್ಚೆ ನಡೆಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಟೋನರ್ ಮಾರ್ಕ್ ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು