ನವದೆಹಲಿ: ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನವಾಜ್ ಷರೀಫ್ ಗೆ ಶುಭಕೋರಿದ್ದಾರೆ.
ನವಾಜ್ ಷರೀಫ್ ಶಸ್ತ್ರಚಿಕಿತ್ಸೆ ಪಡೆಯಲಿದ್ದು, ಅವರಿಗೆ ಶುಭಕೋರುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಮೇ.31 ರಂದು ನವಾಜ್ ಷರೀಫ್ ಅವರಿಗೆ ಬ್ರಿಟನ್ ನಲ್ಲಿ ಹೃದಯ ಶಸ್ತ್ರಚಿಕಿತ್ಸೆ ನಡೆಯಲಿದ್ದು ಒಂದು ವಾರಗಳ ಕಾಲ ನವಾಜ್ ಷರೀಫ್ ಬ್ರಿಟನ್ ನ ಆಸ್ಪತ್ರೆಯಲ್ಲಿ ಇರಲಿದ್ದಾರೆ ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಅಸೀಫ್ ಹೇಳಿದ್ದಾರೆ.
ವೈದ್ಯರು ತೆರೆದ ಹೃದಯ ಶಸ್ತ್ರಚಿಕಿತ್ಸೆ ಪಡೆಯುವುವಂತೆ ನವಾಜ್ ಷರೀಫ್ ಗೆ ಸಲಹೆ ನೀಡಿದ್ದಾರೆ ಎಂದು ನವಾಜ್ ಷರೀಫ್ ಅವರ ಪುತ್ರಿ ಮರ್ಯಾಂ ನವಾಜ್ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದಾರೆ.