ವಿದೇಶ

ಅಪ್ಘಾನಿಸ್ತಾನದ ಅಲ್-ಖೈದಾ ಮುಖಂಡನ ಹತ್ಯೆಯನ್ನು ಖಚಿತಪಡಿಸಿದ ಅಮೆರಿಕ

Srinivas Rao BV
ಕಾಬುಲ್: ಅಫ್ಘಾನಿಸ್ತಾನದ ಅಲ್-ಖೈದಾ ಮುಖಂಡ ಫಾರೂಕ್ ಅಲ್-ಕತಾನಿಯನ್ನು ಹತ್ಯೆ ಮಾಡಿರುವುದನ್ನು ಅಮೆರಿಕದ ಪೆಂಟಗನ್ ಖಚಿತಪಡಿಸಿದೆ. 
ಅ.23 ರಂದು ಪಾಕಿಸ್ತಾನದೊಂದಿಗೆ ಗಡಿ ಪ್ರದೇಶ ಹಂಚಿಕೊಂಡಿರುವ ಪೂರ್ವ ಕಾಬುಲ್ ನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಅಪ್ಘಾನಿಸ್ತಾನದ ಅಲ್-ಖೈದಾ ಮುಖಂಡನನ್ನು ಹತ್ಯೆ ಮಾಡಲಾಗಿದೆ ಎಂದು ಪೆಂಟಗನ್ ನ ಅಧಿಕಾರಿ ಮಾಹಿತಿ ನೀಡಿದ್ದಾರೆ. ಅಮೆರಿಕ ನಡೆಸಿರುವ ಯಶಸ್ವಿ ಕಾರ್ಯಾಚರಣೆ ನಡೆಸಿರುವುದು ಅಮೆರಿಕ ಭಯೋತ್ಪಾದನೆ ವಿರುದ್ಧ, ಭಯೋತ್ಪಾದಕರ ನೆಲೆಗಳ ಮೆಲೆ ದಾಳಿ ನಡೆಸಲು ಬದ್ಧವಾಗಿದೆ ಎಂಬುದನ್ನು ಸೂಚಿಸುತ್ತದೆ ಎಂದು ಅಮೆರಿಕದ ರಕ್ಷಣಾ ಅಧಿಕಾರಿ ತಿಳಿಸಿದ್ದಾರೆ. 
ಅಮೆರಿಕದ ವಿರುದ್ಧ, ಅಮೆರಿಕದ ಮಿತ್ರ ರಾಷ್ಟ್ರಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿರುವ ಭಯೋತ್ಪಾದಕರ ಮೇಲೆ ದಾಳಿ ಮುಂದುವರೆಸುತ್ತೇವೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಪೆಂಟಗನ್ ನ ಮಾಹಿತಿಯ ಪ್ರಕಾರ ಹತ್ಯೆಯಾಗಿರುವ ಅಲ್-ಖೈದಾ ಮುಖಂದ ಕತಾನಿ, ಅಫ್ಘಾನಿಸ್ತಾನದ ಈಶಾನ್ಯ ಪ್ರದೇಶದಲ್ಲಿ ಅಲ್-ಖೈದಾ ಉಗ್ರ ಸಂಘಟನೆಗೆ ಸುರಕ್ಷಿತ ಪ್ರದೇಶಗಳನ್ನು ನಿರ್ಮಿಸುವ ಸಿದ್ಧತೆ ನಡೆಸಿದ್ದ ಎಂದು ತಿಳಿದುಬಂದಿದೆ. 
ಇನ್ನು ಅಪ್ಘಾನಿಸ್ತಾನದ ಗುಪ್ತಚರ ಸಂಸ್ಥೆ ಸಹ ಅಲ್-ಖೈದಾ ಉಗ್ರ ಸಂಘಟನೆ ಮುಖಂಡನ ಹತ್ಯೆಯನ್ನು ಖಚಿತಪಡಿಸಿದ್ದು, ಉಗ್ರ ಸಂಘಟನೆಯ ಎರಡನೇ ಹಂತದ ನಾಯಕ ಬಿಲಾಲ್-ಅಲ್-ಉತಾಬಿಯನ್ನು ಸಹ  ಹತ್ಯೆ ಮಾಡಿರುವ ವರದಿಗಳು ಪ್ರಕಟವಾಗಿದ್ದು, ಅಮೆರಿಕ ಹಾಗೂ ಅಪ್ಘಾನಿಸ್ತಾನ ಇನ್ನಷ್ಟೇ ಈ ಬಗ್ಗೆ ಸ್ಪಷ್ಟನೆ ನೀಡಬೇಕಿದೆ. 
SCROLL FOR NEXT