ಪೂರ್ವ ಕಾಂಗೊದಲ್ಲಿ ಸ್ಫೋಟ: ಬಾಲಕಿ ಸಾವು, 31 ಭಾರತೀಯ ಶಾಂತಿದೂತರಿಗೆ ಗಾಯ
ಪೂರ್ವ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊ ನಗರದ ಗೊಮದಲ್ಲಿ ಉಂಟಾದ ಸ್ಫೋಟದಿಂದ...
ಕಿನ್ಶಾಸ: ಪೂರ್ವ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊ ನಗರದ ಗೊಮದಲ್ಲಿ ಉಂಟಾದ ಸ್ಫೋಟದಿಂದ ಮಗುವೊಂದು ಮೃತಪಟ್ಟು 32 ಮಂದಿ ಭಾರತೀಯ ಶಾಂತಿದೂತರು ಗಾಯಗೊಂಡಿದ್ದಾರೆ. ಪಶ್ಚಿಮ ಗೊಮಾ ನೆರೆಯ ಪ್ರದೇಶ ಕಿಶೆರೊದಲ್ಲಿ ಶಾಂತಿದೂತರು ಬೆಳಗಿನ ವಾಕ್ ಹೋಗುತ್ತಿದ್ದಾಗ ಸ್ಫೋಟ ಸಂಭವಿಸಿತ್ತು. ಈ ಸಂದರ್ಭದಲ್ಲಿ ಸ್ಫೋಟ ತಾಗಿ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ನಿಯೋಗ ತಿಳಿಸಿದೆ. ಸ್ಫೋಟಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.
ಪಕ್ಕದ ಮಸೀದಿಯಲ್ಲಿ ಇಮಾಮ್ ಆಗಿರುವ ಇಸ್ಮಾಯಿಲ್ ಸಲೂಮು ಮಾತನಾಡಿ, ಮೂವರು ಶಾಂತಿದೂತರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ನಮಗೆ ಹಠಾತ್ತಾಗಿ ಸ್ಫೋಟ ಕೇಳಿಬಂದು ನಂತರ ಆಕ್ರಂದನ ಕೇಳಿಸಿತು. ಆಗ ನಾವು ಏನೆಂದು ಓಡಿಹೋಗಿ ನೋಡಿದೆವು ಎಂದು ರಾಯ್ ಟರ್ಸ್ ಸುದ್ದಿ ಸಂಸ್ಥೆಗೆ ವಿವರ ನೀಡಿದರು.
ಸುಮಾರು 18 ಸಾವಿರ ಮಂದಿ ವಿಶ್ವ ಸಂಸ್ಥೆ ಭದ್ರತಾ ಸಿಬ್ಬಂದಿ ಕಾಂಗೊದಲ್ಲಿ ಕೆಲಸ ಮಾಡುತ್ತಿದ್ದು, 1996ರಿಂದ 2003ರವರೆಗೆ ಲಕ್ಷಾಂತರ ಮಂದಿ ಸ್ಥಳೀಯ ಸಂಘರ್ಷದಲ್ಲಿ ಮೃತಪಟ್ಟಿದ್ದಾರೆ ಮತ್ತು ಹತ್ತಾರು ಮಂದಿ ಸೇನಾ ಪಡೆ ಕಾರ್ಯನಿರ್ವಹಿಸುತ್ತಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.