ಚೀನಾವನ್ನು ಹಣಿಯಲು ಭಾರತ ಜಪಾನ್ ಗೆ ದಾಳವಾಗುವುದಿಲ್ಲ: ಚೀನಾ ಮಾಧ್ಯಮ
ಬೀಜಿಂಗ್: ಚೀನಾವನ್ನು ಹಣಿಯಲು ಭಾರತ ಜಪಾನ್ ಗೆ ದಾಳವಾಗುವುದಿಲ್ಲ ಎಂದು ಚೀನಾ ಮಾಧ್ಯಮ ವಿಶ್ವಾಸ ವ್ಯಕ್ತಪಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್ ಗೆ ಪ್ರವಾಸ ಕೈಗೊಂಡಿರುವ ಹಿನ್ನೆಲೆಯಲ್ಲಿ ಲೇಖನ ಪ್ರಕಟಿಸಿರುವ ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ ಗ್ಲೋಬಲ್ ಟೈಮ್ಸ್, ಜಪಾನ್ ಚೀನಾವನ್ನು ಹಣಿಯಲು ಭಾರತ- ಚೀನಾ ನಡುವಿನ ವಿವಾದಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಗ್ಲೋಬಲ್ ಟೈಮ್ಸ್ ಆರೋಪಿಸಿದೆ.
ಚೀನಾದ ವರ್ಚಸ್ಸನ್ನು ಕುಗ್ಗಿಸಲು ಜಪಾನ್ ಭಾರತ-ಚೀನಾ ನಡುವಿನ ವಿವಾದಗಳನ್ನು ದುರುಪಯೋಗಪಡಿಸಿಕೊಳ್ಳಲು ಯತ್ನಿಸುತ್ತಿದೆ. ಆದರೆ ಭಾರತ ಜಪಾನ್ ನ ದಾಳವಾಗುವುದಿಲ್ಲ ಎಂದು ಚೀನಾದ ಮಾಧ್ಯಮ ಅಭಿಪ್ರಾಯಪಟ್ಟಿದೆ. ಜಪಾನ್ ನ ರಾಜತಾಂತ್ರಿಕ ನೀತಿಗಳು ಕೆಲವು ವರ್ಷಗಳಿಂದ ಚೀನಾವನ್ನು ಸುತ್ತುವರೆಯುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿವೆ. ಭಾರತಕ್ಕೆ ಜಪಾನ್ ನಿಂದ ಅಣುಶಕ್ತಿ ತಂತ್ರಜ್ಞಾನ, ಮಿಲಿಟರಿ ತಂತ್ರಜ್ಞಾನ ಹಾಗೂ ಹೂಡಿಕೆಗಳನ್ನು ಆಕರ್ಷಿಸಲು , ಹೈಸ್ಪೀಡ್ ರೈಲುಗಳನ್ನು ಖರೀದಿಸುವ ಅಗತ್ಯವಿದೆ. ಆದರೆ ಭಾರತ ಜಪಾನ್ ನ ದಾಳವಾಗುವುದಿಲ್ಲ ಎಂದು ಚೀನಾ ಬಲವಾದ ವಿಶ್ವಾಸ ವ್ಯಕ್ತಪಡಿಸಿದೆ.