ಇಸ್ಲಾಮಾಬಾದ್: ಬಲೂಚಿಸ್ತಾನದಲ್ಲಿ ಪಾಕಿಸ್ತಾನ ಚೀನಾದ ಸಹಯೋಗದಲ್ಲಿ ನಿರ್ಮಿಸಿರುವ ಗ್ವದಾರ್ ಬಂದರನ್ನು ಪಾಕ್ ಪ್ರಧಾನಿ ನವಾಜ್ ಷರೀಫ್ ಉದ್ಘಾಟಿಸಲಿದ್ದು, ಬೃಹತ್ ಪ್ರತಿಭಟನೆ ನಡೆಯುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಭದ್ರತೆಯನ್ನು ಕೈಗೊಳ್ಳಲಾಗಿದೆ.
ಗ್ವದಾರ್ ಬಂದರು ಮೂಲಕ ವ್ಯಾಪಾರ ವಹಿವಾಟುಗಳಿಗೆ ಚಾಲನೆ ನೀಡುವ ಮೂಲಕ ಬಂದರು ಉದ್ಘಾಟನೆಯಲಿದ್ದು, ಪಾಕ್ ನ ಬಲೂಚಿಸ್ತಾನದ ಪ್ರಾಂತ್ಯದಲ್ಲಿ ಬೃಹತ್ ಪ್ರತಿಭಟನೆ ನಡೆಯುವ ಸಾಧ್ಯತೆ ಇದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಸೇನಾ ಮುಖ್ಯಸ್ಥ ರಹೀಲ್ ಷರೀಫ್, ಬಲೂಚಿಸ್ತಾನ ಗೌರ್ನರ್ ಮೊಹಮ್ಮದ್ ಖಾನ್, ಮುಖ್ಯಮಂತ್ರಿ ನವಾಬ್ ಸಹಾನುಲ್ಲಾ ಝೆಹ್ರಿ, 15 ರಾಷ್ಟ್ರಗಳ ರಾಯಭಾರಿಗಳು ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಗ್ವದಾರ್ ಪಾಕಿಸ್ತಾನ-ಚೀನಾ ಸ್ನೇಹಕ್ಕೆ ನೈಸರ್ಗಿಕವಾಗಿ ದೊರೆತ ಉಡುಗೊರೆಯಾಗಿದ್ದು, ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಹೊಸ ಮೈಲುಗಲ್ಲನ್ನು ಸ್ಥಾಪಿಸಿದ್ದೇವೆ ಎಂದು ಪಾಕಿಸ್ತಾನ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.