ಬೀಜೀಂಗ್: ಚೀನಾದ ಜೆ-10 ಯುದ್ಧ ವಿಮಾನವನ್ನು ಚಲಾಯಿಸಿದ್ದ ಮೊದಲ ಮಹಿಳಾ ಪೈಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
30 ವರ್ಷದ ಯು ಕ್ಸೂ ಟ್ರೈನಿಂಗ್ ವೇಳೆ ಮತ್ತೊಂದು ಜೆಟ್ ಯುದ್ಧ ವಿಮಾನಕ್ಕೆ ಡಿಕ್ಕಿ ಹೊಡಿದಿದ್ದು ಈ ವೇಳೆ ಕ್ಸೂ ಮೃತಪಟ್ಟಿದ್ದು ಸಹ ಪೈಲೆಟ್ ಜೆಟ್ ನಿಂದ ಸುರಕ್ಷಿತವಾಗಿ ಹೊರಗೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ ಎಂದು ಚೀನಾ ಡೈಲಿ ನ್ಯೂಸ್ ಪೇಪರ್ ವರದಿ ಮಾಡಿದೆ.
ನಾಲ್ವರು ಮಹಿಳಾ ಪೈಲಟ್ ಗಳು ಮಾತ್ರ ಯುದ್ಧ ವಿಮಾನ ನಡೆಸಬಲ್ಲ ಸಾಮರ್ಥ್ಯ ಹೊಂದಿದ್ದು ಈ ಅವಘಡದಿಂದಾಗಿ ಚೀನಾ ವಾಯುಸೇನೆಗೆ ಬಾರೀ ನಷ್ಟ ಉಂಟಾಗಿದೆಯಂತೆ.
2005ರಲ್ಲಿ ಯು ಕ್ಸೂ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ಎ) ವಾಯುಸೇನೆಯನ್ನು ಸೇರಿದ್ದರು. ಕಳೆದ ನಾಲ್ಕು ವರ್ಷಗಳ ಹಿಂದೆ ಅವರು ಪದವಿ ಪಡೆದಿದ್ದರು. ಯುದ್ಧ ವಿಮಾನ ಚಲಾಯಿಸಲು 16 ಮಹಿಳಾ ಪೈಲಟ್ ಗಳು ಅರ್ಹತೆ ಪಡೆದಿದ್ದು, 2012ರಲ್ಲಿ ಯು ಕ್ಸೂ ಮೊದಲ ಬಾರಿಗೆ ಜೆ-10 ಯುದ್ಧ ವಿಮಾನ ಚಲಾಯಿಸಿ ಯುದ್ಧ ವಿಮಾನ ಚಲಾಯಿಸಿದ ಮೊದಲ ಮಹಿಳಾ ಪೈಲಟ್ ಎಂಬ ಖ್ಯಾತಿಗೆ ಭಾಜನರಾಗಿದ್ದರು.