ಸ್ವಸ್ತಿಕ ಮತ್ತು ಟ್ರಂಪ್ ಪರ ಗೋಡೆಬರಹಗಳಿಂದ ನ್ಯೂಯಾರ್ಕ್ ಉದ್ಯಾನವನ ವಿರೂಪ 
ವಿದೇಶ

ಸ್ವಸ್ತಿಕ ಮತ್ತು ಟ್ರಂಪ್ ಪರ ಗೋಡೆಬರಹಗಳಿಂದ ನ್ಯೂಯಾರ್ಕ್ ಉದ್ಯಾನವನ ವಿರೂಪ

ನ್ಯೂಯಾರ್ಕ್ ನ ಬ್ರೂಕ್ಲಿನ್ ನ ಉದ್ಯಾನವನದಲ್ಲಿ 'ಸ್ವಸ್ತಿಕ' ಚಿಹ್ನೆ ಮತ್ತು 'ಗೋ ಟ್ರಂಪ್' ಗೋಡೆ ಬರಹಗಳೊಂದಿಗೆ ವಿರೂಪಗೊಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ನ್ಯೂಯಾರ್ಕ್: ನ್ಯೂಯಾರ್ಕ್ ನ ಬ್ರೂಕ್ಲಿನ್ ನ ಉದ್ಯಾನವನದಲ್ಲಿ 'ಸ್ವಸ್ತಿಕ' ಚಿಹ್ನೆ ಮತ್ತು 'ಗೋ ಟ್ರಂಪ್' ಗೋಡೆ ಬರಹಗಳೊಂದಿಗೆ ವಿರೂಪಗೊಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 
ಬ್ರೂಕ್ಲಿನ್ ಹೈಟ್ಸ್ ಪಾರ್ಕ್ ನಲ್ಲಿ ಆಡುತ್ತಿದ್ದ ಮಕ್ಕಳ ಆಟಕ್ಕೆ ಈ ಸೆಮಿಟಿಕ್ ವಿರೋಧಿ ಚಿಹ್ನಗೆಳಿಂದ ಕುಂದಾಗಿದೆ ಎಂದು ನಗರದ ಕೌನ್ಸಿಲ್ ಸದಸ್ಯ ಬ್ರಾಡ್ ಲ್ಯಾಂಡರ್ ಶುಕ್ರವಾರ ಹೇಳಿದ್ದಾರೆ. 
ವಿಶ್ವದ ಅತಿ ಉಗ್ರ ಸರ್ವಾಧಿಕಾರಿ ಜರ್ಮನಿಯ ಅಡಾಲ್ಫ್ ಹಿಟ್ಲರ್ ನ ಪಕ್ಷದ ಚಿಹ್ನೆಯಾಗಿದ್ದ ಸ್ವಸ್ತಿಕ, ಜನಾಂಗೀಯ ನಿಂದನೆಯ ಚಿಹ್ನೆ ಎಂದೇ ಪರಿಗಣಿಸಲಾಗುತ್ತದೆ. 
"ಟ್ರಂಪ್ ಬೆಂಬಲಿಗರಿಂದ ಇನ್ನು ದ್ವೇಷ ಹೆಚ್ಚುತ್ತಲೇ ಇದೆ" ಎಂದು ಲ್ಯಾಂಡರ್ ಟ್ವೀಟ್ ಮಾಡಿದ್ದಾರೆ. 
ನ್ಯೂಯಾರ್ಕ್ ನ ಇನ್ನು ಹಲವು ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಸ್ತಿಕಗಳು ಮತ್ತು ಜನಾಂಗೀಯ ನಿಂದನೆಯ ಗೋಡೆ ಬರಹಗಳನ್ನು ಮೂಡಿಸಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. 
"ಈ ದ್ವೇಷ ಮತ್ತು ಪ್ರಚೋದನೆಯ" ವಿರುದ್ಧ ಭಾನುವಾರ ಉದ್ಯಾನವನದಲ್ಲಿ ರ್ಯಾಲಿ ನಡೆಸಲಾಗುವುದು ಎಂದು ಪ್ರಾದೇಶಿಕ ಅಧಿಕಾರಿಗಳು ಹೇಳಿದ್ದಾರೆ.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

19 ವರ್ಷಗಳ ಹಳೆಯ ದಾಖಲೆ ಉಡೀಸ್: ಅಭಿಷೇಕ್, ಪಾಂಡ್ಯ ಅಬ್ಬರ; ಜಿಂಬಾಬ್ವೆಗೆ 257 ರನ್‌ ಬೃಹತ್ ಮೊತ್ತದ ಗುರಿ ನೀಡಿದ ಭಾರತ!

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT