ಉಲಾನ್ ಬತಾರ್: ಡೊನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷರಾಗುವುದರಿಂದ ನನಗೆ ಯಾವುದೇ ರೀತಿಯ ಚಿಂತೆಯಿಲ್ಲ ಎಂದು ಟಿಬೆಟಿಯನ್ ಧರ್ಮಗುರು ದಲಾಯಿ ಲಾಮಾ ಅಭಿಪ್ರಾಯ ಪಟ್ಟಿದ್ದಾರೆ.
ನಾಲ್ಕು ದಿನಗಳ ಮಂಗೋಲಿಯಾ ಪ್ರವಾಸದಲ್ಲಿರುವ ದಲಾಯಿ ಲಾಮ, ಉದ್ಯಮಿ ಟ್ರಂಪ್ ಅಮೆರಿಕಾ ಅಧ್ಯಕ್ಷರಾಗಿರುವುದರಿಂದ ಜಾಗತಿಕ ಮಟ್ಟದ ನೀತಿನಿಯಮಗಳು ಉತ್ತಮಗೊಳ್ಳುತ್ತವೆ ಎಂದು ಹೇಳಿದ್ದಾರೆ.
ಅಮೆರಿಕಾ ಅಧ್ಯಕ್ಷಿಯ ಚುನಾವಣೆ ವೇಳೆ ಮುಸ್ಲಿಮರ ವಿರುದ್ಧ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ದಲಾಯಿ ಲಾಮಾ, ಚುನಾವಣಾ ಪ್ರಚಾರದ ವೇಳೆ ಅಭ್ಯರ್ಥಿಗಳಿಗೆ ಮಾತನಾಡಲು ಹೆಚ್ಚಿನ ಸ್ವಾತಂತ್ಯ್ರವಿರುತ್ತದೆ. ಒಂದು ಬಾರಿ ಅವರು ಚುನಾವಣೆಯಲ್ಲಿ ಆಯ್ಕೆಯಾದ ಮೇಲೆ ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಹಾಗೂ ಹೊಣೆಗಾರಿಕೆ ಇರುತ್ತದೆ , ಆಗ ವಾಸ್ತವತೆ ಅರಿತುಕೊಂಡು ಕೆಲಸ ಮಾಡುತ್ತಾರೆ ಎಂದು ದಲಾಯಿ ಲಾಮಾ ಹೇಳಿದ್ದಾರೆ.