ವಾಷಿಂಗ್ಟನ್: ಕ್ಯೂಬಾದ ಕ್ರಾಂತಿಕಾರ ನಾಯಕ ಫೀಡೆಲ್ ಕ್ಯಾಸ್ಟ್ರೊ ಅವರ ಅಂತ್ಯ ಸಂಸ್ಕಾರದಲ್ಲಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಭಾಗವಹಿಸುವುದಿಲ್ಲ ಎಂದು ವೈಟ್ ಹೌಸ್ ತಿಳಿಸಿದೆ.
ಬರಾಕ್ ಒಬಾಮಾ ಅವರು ಫೀಡೆಲ್ ಕ್ಯಾಸ್ಟ್ರೋ ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೋಳ್ಳುತ್ತಿಲ್ಲ ಎಂದು ವೈಟ್ ಹೌಸ್ ವಕ್ತಾರ ಜೋಶ್ ಅರ್ನೆಸ್ಟ್ ಹೇಳಿದ್ದಾರೆ.
ಕ್ಯೂಬಾದೊಂದಿಗಿನ ವೈಮನಸ್ಯ ಕಡಿದುಕೊಂಡು ಉತ್ತಮ ಸಂಬಂಧ ಬೆಳೆಸಿಕೊಳ್ಳಲು ಒಬಾಮಾ ಕಳೆದ ಎರಡು ವರ್ಷಗಳಿಂದ ಪ್ರಯತ್ವಿಸುತ್ತಿದ್ದರು.
ಇನ್ನು ರಷ್ಯಾ, ಬ್ರಿಟನ್ ಅಧ್ಯಕ್ಷರು ಕ್ಯಾಸ್ಟ್ರೋ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೋಳ್ಳದೇ ಇರಲು ನಿರ್ಧರಿಸಿದ್ದಾರೆ.