ವಿದೇಶ

'ಟೈಮ್ಸ್ ವರ್ಷದ ವ್ಯಕ್ತಿ' ಸಮೀಕ್ಷೆಯಲ್ಲಿ ಪ್ರಧಾನ ಮಂತ್ರಿ ಮೋದಿ ಮುನ್ನಡೆ

ಟೈಮ್ಸ್ ಮ್ಯಾಗಜೀನ್ 2016ನೇ ಸಾಲಿನ ವರ್ಷದ ವ್ಯಕ್ತಿ ಗೌರವ ಸಮೀಕ್ಷೆಯಲ್ಲಿ ಪ್ರಧಾನ ಮಂತ್ರಿ...

ನ್ಯೂಯಾರ್ಕ್: ಟೈಮ್ಸ್ ಮ್ಯಾಗಜೀನ್ 2016ನೇ ಸಾಲಿನ ವರ್ಷದ ವ್ಯಕ್ತಿ  ಗೌರವ ಸಮೀಕ್ಷೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಂದಿದ್ದಾರೆ.
ಓದುಗರು ಹಾಕುವ ಮತಗಳನ್ನು ಪರಿಗಣಿಸಲಾಗುತ್ತಿದ್ದು, ಇಲ್ಲಿ ಮೋದಿಯವರು ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್, ನಿರ್ಗಮಿತ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಕೂಡ ಸಮೀಕ್ಷೆಯಲ್ಲಿ ಹಿಂದಿಕ್ಕಿದ್ದಾರೆ.
ಸತತ ನಾಲ್ಕನೇ ವರ್ಷ ಟೈಮ್ಸ್ ಮ್ಯಾಗಜೀನ್ ನಡೆಸುವ ವರ್ಷದ ವ್ಯಕ್ತಿ ಸ್ಪರ್ಧೆಯಲ್ಲಿ ಪ್ರಧಾನಿ ಮೋದಿಯವರಿದ್ದಾರೆ. ಅಮೆರಿಕಾದಿಂದ ಪ್ರಕಟವಾಗುವ ಮ್ಯಾಗಜಿನ್ ಪ್ರತಿವರ್ಷ ಆನ್ ಲೈನ್ ಸಮೀಕ್ಷೆ ನಡೆಸುತ್ತದೆ. ಹಿಂದಿನ ವರ್ಷ ವಿಶ್ವದಲ್ಲಿ ಹೆಚ್ಚು ಸುದ್ದಿಯಲ್ಲಿದ್ದ, ಹೆಚ್ಚು ಪ್ರಭಾವ ಬೀರಿದ ವ್ಯಕ್ತಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗುತ್ತದೆ. ಕಳೆದ ವರ್ಷ ಜರ್ಮನ್ ಚಾನ್ಸೆಲರ್ ಅಂಜೆಲಾ ಮರ್ಕರ್ ಟೈಮ್ಸ್ ನ ವರ್ಷದ ವ್ಯಕ್ತಿಯಾಗಿದ್ದರು.
ಪ್ರತಿವರ್ಷ ಟೈಮ್ಸ್ ನ ಸಂಪಾದಕರು ವಿಶ್ವದ ನಾಯಕರು, ಅಧ್ಯಕ್ಷರು, ಪ್ರತಿಭಟನಾಕಾರರು, ಖಗೋಳ ವಿಜ್ಞಾನಿಗಳು, ಪಾಪ್ ಐಕಾನ್ ಗಳು, ಅಡ್ಡಿಪಡಿಸುವವರಲ್ಲಿ ವರ್ಷದ ವ್ಯಕ್ತಿ ಯಾರಾಗಬೇಕೆಂದು ನಿರ್ಧಾರ ತೆಗೆದುಕೊಳ್ಳುತ್ತಾರೆ. ಓದುಗರು ಕೂಡ ಮತ ಚಲಾಯಿಸುವಂತೆ ಕೇಳುತ್ತಾರೆ. ಓದುಗರ ಮತಗಳು ಬಹಳ ಮುಖ್ಯವಾಗಿರುತ್ತದೆ. 
ಈ ವರ್ಷ ಓದುಗರು ಚಲಾಯಿಸಿದ ಆರಂಭದ ಮತಗಳಲ್ಲಿ ನರೇಂದ್ರ ಮೋದಿಯವರು ಶೇಕಡಾ 21ರಷ್ಟು ಮತಗಳಿಂದ ಮುಂದಿದ್ದಾರೆ. ಸ್ವಲ್ಪ ಸಮಯ ವಿಕಿಲೀಕ್ಸ್ ಸ್ಥಾಪಕ ಜುಲಿಯನ್ ಅಸ್ಸಂಜೆ ಆನ್ ಲೈನ್ ಸಮೀಕ್ಷೆಯಲ್ಲಿ ಡೊನಾಲ್ಡ್ ಟ್ರಂಪ್ ಗಿಂತ ಮುಂದಿದ್ದರು. 
ಪ್ರಸ್ತುತ ಮೋದಿಯವರು ಶೇಕಡಾ 21 ಮತಗಳನ್ನು ಪಡೆದಿದ್ದರೆ, ವ್ಲಾಡಿಮಿರ್ ಪುಟಿನ್ ಶೇಕಡಾ 6, ಒಬಾಮಾ ಶೇಕಡಾ 7, ಟ್ರಂಪ್ ಶೇಕಡಾ 6 ಮತಗಳನ್ನು ಪಡೆದಿದ್ದಾರೆ. ಓದುಗರ ಸಮೀಕ್ಷೆ ಡಿಸೆಂಬರ್ 4ರಂದು ಮುಕ್ತಾಯವಾಗಲಿದ್ದು ಆ ಸಂದರ್ಭದಲ್ಲಿ ಯಾರು ಮುಂದಿರುತ್ತಾರೆ ಎಂಬುದರ ಮೇಲೆ ವರ್ಷದ ವ್ಯಕ್ತಿ ಯಾರಾಗುತ್ತಾರೆಂಬುದು ನಿರ್ಧಾರವಾಗಲಿದೆ.
ಪ್ರಧಾನಿ ಮೋದಿಯವರು 2014ರಲ್ಲಿ ಟೈಮ್ಸ್ ಓದುಗರ ವರ್ಷದ ವ್ಯಕ್ತಿ ಪ್ರಶಸ್ತಿಗೆ ಭಾಜನರಾಗಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT