ವಿದೇಶ

ಮುಖ್ಯಸ್ಥನ ಸಾವನ್ನು ಖಚಿತ ಪಡಿಸಿದ ಇಸಿಸ್!

Srinivasamurthy VN

ವಾಷಿಂಗ್ಟನ್: ಕುಖ್ಯಾತ ಉಗ್ರರಗಾಮಿ ಸಂಘಟನೆ ಇಸ್ಲಾಮಿಕ್ ಸ್ಟೇಟ್ ನ ಮುಖಸ್ಥ ಸಾವನ್ನಪ್ಪಿದ್ದಾನೆ ಎಂದು ಸ್ವತಃ ಇಸಿಸ್ ಸ್ಪಷ್ಟನೆ ನೀಡಿದೆ.

ಸೋಮವಾರ ಈ ಬಗ್ಗೆ ಮಾಹಿತಿ ನೀಡಿರುವ ಇಸಿಸ್, ತನ್ನ ಸಂಘಟನೆ ಮುಖ್ಯಸ್ಥ ವಾಯಿಲ್ ಆದಿಲ್ ಹಸನ್ ಸಲ್ಮಾನ್ ಅಲ್ ಫಯಾದ್ ಅಲಿಯಾಸ್ ಅಬು ಮೊಹಮದ್ ಅವ್ ಫರೂಖನ್  ಹುತಾತ್ಮರಾಗಿದ್ದಾರೆ ಎಂದು ತನ್ನ ಪ್ರಕಟಣೆಯಲ್ಲಿ ಹೇಳಿದೆ. ಆದರೆ ಸಲ್ಮಾನ್ ಅಲ್ ಫಯಾದ್ ಹೇಗೆ ಮತ್ತು ಯಾವ ಸಂದರ್ಭದಲ್ಲಿ ಸತ್ತ ಎಂಬ ವಿಚಾರವನ್ನು ಮಾತ್ರ ಎಲ್ಲಿಯೂ ಹೇಳಿಲ್ಲ.

ಇನ್ನು ಈ ಹಿಂದೆ ಕಳೆದ ಸೆಪ್ಟೆಂಬರ್ 7ರಂದು ಅಮೆರಿಕ ನೇತೃತ್ವದ ಮಿತ್ರ ಪಡೆಗಳು ಇಸಿಸ್ ಕಪಿಮುಷ್ಠಿಯಲ್ಲಿರುವ ರಾಖಾ ನಗರದ ಸುತ್ತಮುತ್ತ ದ್ರೋಣ್ ದಾಳಿ ನಡೆಸುವ ಮೂಲಕ ಸಾಕಷ್ಟು  ಉಗ್ರರನ್ನು ಕೊಂದು ಹಾಕಿತ್ತು. ಈ ದಾಳಿಯಲ್ಲಿ ಇಸಿಸ್ ಮುಖ್ಯಸ್ಥ ಸಲ್ಮಾನ್ ಅಲ್ ಫಯಾದ್ ಕೂಡ ಸಾವನ್ನಪ್ಪಿದ್ದಾನೆ ಎಂದು ಹೇಳಿಕೊಂಡಿತ್ತು. ಸಲ್ಮಾನ್ ಅಲ್ ಫಯಾದ್ ಮೊಟಾರ್ ಬೈಕ್ ನಲ್ಲಿ  ಬೆಂಬಲಿಗರೊಂದಿಗೆ ತೆರಳುತ್ತಿದ್ದಾಗ ಆತನ ಮೇಲೆ ಕ್ಷಿಪಣಿ ದಾಳಿ ನಡೆಸಿಕೊಲ್ಲಲಾಗಿದೆ ಎಂದು ಹೇಳಿಕೊಂಡಿತ್ತು.

ಸಲ್ಮಾನ್ ಅಲ್ ಫಯಾದ್ ತನ್ನ ಕುಕೃತ್ಯಗಳಿಂದಾಗಿಯೇ ವಿಶ್ವ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದ. ಅಂತಾರಾಷ್ಟ್ರೀಯ ಪತ್ರಕರ್ತರನ್ನು ಅಪಹರಿಸಿ, ವಿನಾಕಾರಣ ಅವರ ತಲೆ ಕಡಿದು ತನ್ನ  ವಿಕೃತಿ ಮೆರೆದಿದ್ದ. ಈ ಘಟನೆ ಬಳಿಕ ಇಸ್ಲಾಮಿಕ್ ಸಂಘಟನೆ ವಿರುದ್ಧ ರಷ್ಯಾ ಮತ್ತು ಫ್ರಾನ್ಸ್ ಸೇರಿದಂತೆ ವಿವಿಧ ರಾಷ್ಟ್ರಗಳು ವಾಯುದಾಳಿ ನಡೆಸಿದ್ದವು.

SCROLL FOR NEXT