ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಮೊದಲ ಬಾರಿಗೆ ಮೇಕಪ್ ಇಲ್ಲದ ಪತ್ನಿಯನ್ನು ಕಂಡು ವಿಚ್ಛೇದನ ನೀಡಿದ ಪತಿ

ಮೊದಲ ಬಾರಿಗೆ ಮೇಕಪ್ ಇಲ್ಲದ ಪತ್ನಿಯ ಮುಖ ಕಂಡು ಗುರುತಿಸದಾದ ಪತಿ ಮಹಾಶಯ ಆಕೆಗೆ ಡೈವೋರ್ಸ್ ನೀಡಿರುವ ವಿಚಿತ್ರ ಘಟನೆ ದುಬೈನಲ್ಲಿ ನಡೆದಿದೆ....

ಮೇಕಪ್
Vishwanath S
Updated On : 19 Oct 2016, 7:49 am
ದುಬೈ: ಮೊದಲ ಬಾರಿಗೆ ಮೇಕಪ್ ಇಲ್ಲದ ಪತ್ನಿಯ ಮುಖ ಕಂಡು ಗುರುತಿಸದಾದ ಪತಿ ಮಹಾಶಯ ಆಕೆಗೆ ಡೈವೋರ್ಸ್ ನೀಡಿರುವ ವಿಚಿತ್ರ ಘಟನೆ ದುಬೈನಲ್ಲಿ ನಡೆದಿದೆ. 
ಯುಎಇಯ ಶಾರ್ಜಾದಲ್ಲಿರುವ ಅಲ್ ಮುಮ್ಮಜಾರ್ ಬೀಚ್ ಗೆ ನವ ದಂಪತಿಗಳಾದ 34 ವರ್ಷದ ಪತಿ 28 ವರ್ಷದ ಪತ್ನಿಯೊಂದಿಗೆ ತೆರಳಿದ್ದರು. ಸಮುದ್ರದಲ್ಲಿ ಮೈಮರೆತು ಸ್ನಾನ ಮಾಡಿದ್ದ ಪತ್ನಿಯ ಮೇಕಪ್ ಸಂಪೂರ್ಣವಾಗಿ ತೊಳೆದುಹೋಗಿತ್ತು. ಇತ್ತ ತನ್ನ ಸ್ವಂತ ಪತ್ನಿಯನ್ನು ಗುರುತಿಸದಾದ ಪತಿ ಮಹಾಶಯ ಮೇಕಪ್ ಇದ್ದಾಗಿನ ಆಕೆಯ ಮುಖ ಸೌಂದರ್ಯ ಮೇಕಪ್ ಇಲ್ಲದಿದ್ದಾಗ ಕಂಡು ಹೌಹಾರಿದ್ದು ಆಕೆಗೆ ವಿಚ್ಛೇದನ ನೀಡಿದ್ದಾನೆ. 
ಕಾಸ್ಮೆಟಿಕ್ ಹಾಗೂ ನಕಲಿ ಐ ಲ್ಯಾಶಗಳನ್ನು ಬಳಿಸಿಕೊಂಡು ಸುಂದರಿಯಾಗಿ ಕಾಣಿಸಿಕೊಳ್ಳುವ ಮೂಲಕ ತನಗೆ ಆಕೆ ವೈವಾಹಿಕ ಮೋಸ ಮಾಡಿದ್ದಾಳೆ ಎಂದು ದೂರಿರುವ ಪತಿ ಮಹಾಶಯ ಆಕೆಗೆ ವಿಚ್ಛೇದನ ನೀಡಿದ್ದಾನೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ. 

Advertisement

Advertisement

ಇತ್ತ ಮುಖ ಸೌಂದರ್ಯ ಕಳೆದುಕೊಂಡು ವಿಚ್ಛೇದನೆಗೆ ಗುರಿಯಾಗಿರುವ ನೊಂದ ಮಹಿಳೆ ಕೌನ್ಸೆಲಿಂಗ್ ಯಾಚಿಸಿ ತಮ್ಮನ್ನು ಸಂಪರ್ಕಿಸಿರುವುದಾಗಿ ಮನೋ ಚಿಕಿತ್ಸಕ ಡಾ. ಅಬ್ದುಲ್ ಅಜೀಜ್ ಅಸಫ್ ತಿಳಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments