ವಿದೇಶ

ಕೊಲೆ ಆರೋಪ ಸಾಬೀತು: ಸೌದಿ ಯುವರಾಜನಿಗೆ ಮರಣ ದಂಡನೆ

Shilpa D

ರಿಯಾದ್: ವ್ಯಕ್ತಿಯೊಬ್ಬನ ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದ ರಾಜ ಮನೆತನದ ಯುವರಾಜನಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ. ಯುವರಾಜ ತುರ್ಕಿ ಬಿನ್ ಸೌದ್ ಅಲ್ ಕಬೀರ್ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿದ್ದಾರೆ.

ಸೌದಿಯ ಯುವರಾಜ ತನ್ನ ಸ್ನೇಹಿತನನ್ನು ಹತ್ಯೆ ಮಾಡಿದ ಆರೋಪ ಸಾಬೀತಾಗಿದೆ ಎಂದು ಯುವರಾಜನ ಹೆಸರನ್ನು ನಮೂದಿಸದೆ ನವೆಂಬರ್ 2014ರಲ್ಲಿ ಅರಬ್​ನ ಪತ್ರಿಕೆಯೊಂದು ವರದಿ ಮಾಡಿತ್ತು.

ರಿಯಾದ್ ನಲ್ಲಿ ಡೆಸರ್ಟ್ ಕ್ಯಾಂಪ್ ಗಳು ನಡೆಯುವುದು ಸಾಮಾನ್ಯ. 2012ರ ಡಿಸೆಂಬರ್​ನಲ್ಲಿ ರಿಯಾದ್ ಸಮೀಪದ ಕ್ಯಾಂಪ್​ನಲ್ಲಿ ಯುವರಾಜ ಮತ್ತು ಆತನ ಸ್ನೇಹಿತನ ನಡುವೆ ವಾಗ್ವಾದ ನಡೆದಿತ್ತು. ಆ ನಂತರ ಯುವರಾಜ ಆತನಿಗೆ ಗುಂಡಿಟ್ಟು ಹತ್ಯೆ ಮಾಡಿದ್ದ ಮತ್ತು ಮತ್ತೋರ್ವನಿಗೆ ಗುಂಡೇಟು ತಗುಲಿತ್ತು. ನಂತರ ಹತ್ಯೆಗೀಡಾದ ವ್ಯಕ್ತಿ ತನ್ನ ಸ್ನೇಹಿತ ಎಂದು ಯುವರಾಜನೇ ಪೊಲೀಸರಿಗೆ ಮಾಹಿತಿ ನೀಡಿದ್ದ.

ಸೌದಿ ಅರೇಬಿಯಾದಲ್ಲಿ ನ್ಯಾಯಾಂಗ ವ್ಯವಸ್ಥೆ ಕಟ್ಟುನಿಟ್ಟಾಗಿದ್ದು, 2015ರಲ್ಲಿ 158 ಜನರಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿತ್ತು. ಈ ವರ್ಷ ಇದುವರೆಗೂ 134 ಜನರಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ.

SCROLL FOR NEXT