ಡೊನಾಲ್ಡ್ ಟ್ರಂಪ್ 
ವಿದೇಶ

ಟ್ರಂಪ್ ನನ್ನ ಸ್ತನ ಸ್ಪರ್ಶಿಸಿದ್ದರು; ಯೋಗಗುರು ಅಳಲು

ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನನ್ನ ಸ್ತನಗಳನ್ನು ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಅಮೆರಿಕಾದ ಯೋಗ ಗುರು...

ನ್ಯೂಯಾರ್ಕ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನನ್ನ ಸ್ತನಗಳನ್ನು ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಅಮೆರಿಕಾದ ಯೋಗ ಗುರು ಕರೆನಾ ವಿರ್ಜಿನಿಯಾ ಆರೋಪಿಸಿದ್ದಾರೆ.

1998 ರಲ್ಲಿ ನಾನು 27 ವರ್ಷದಳಾಗಿದ್ದೆ. ಯುಎಸ್ ಒಪನ್ ಟೆನ್ನಿಸ್ ಟೂರ್ನ್ ಮೆಂಟ್ ನಂತರ ನಾನು ಮನೆಗೆ ತೆರಳಲು ಕಾರಿಗಾಗಿ ಕಾಯುತ್ತಾ ಹೊರಗಡೆ ನಿಂತಿದ್ದೆ. ಈ ವೇಳೆ  ತಮ್ಮ ಸ್ನೇಹಿತರಜೊತೆ ನಿಂತಿದ್ದ ಟ್ರಂಪ್ " ಹೇಯ್ ಅವಳನ್ನು ನೋಡಿರಿ, ಹಿಂದೆಂದೂ ನಾನು ಇಂಥ ಕಾಲುಗಳನ್ನು ನೋಡಿರಲಿಲ್ಲ ಎಂದು ಕಿಚಾಯಿಸಿದ್ದರು, ನಂತರ ನನ್ನ ಬಳಿ ಬಂದು ನಾನು ಯಾರು ಎಂದು ಗೊತ್ತಿದೆಯೆ ಎಂದು ಪ್ರಶ್ನಿಸಿದರು , ನಂತರ ನನ್ನ ಹತ್ತಿರ ಬಂದು ಅವರ ಬಲಗೈ ಇಂದ ನನ್ನ ಬಲ ತೋಳನ್ನು ಹಿಡಿದು ಎಳೆದರು. ಬಳಿಕ ಅವರ ಬಲಗೈಯಿಂದ ನನ್ನ ಸ್ತನಗಳನ್ನು ಸ್ಪರ್ಶಿಸಿದರು. ಈ ಘಟನೆಯಿಂದ ನನಗೆ ಶಾಕ್ ಆಯಿತು. ನಾನು ಶಕ್ತಿಹೀನಳಾಗಿದ್ದೆ. ಅಷ್ಟರಲ್ಲಿ ನನ್ನ ಕಾರು ಬಂದು ಡೋರ್ ತೆಗೆದು ನಾನು ಒಳ ಕುಳಿತೆ, ನಾನು ಶಾರ್ಟ್ ಸ್ಕರ್ಟ್ ಮತ್ತು ಹೈ ಹೀಲ್ಸ್ ಹಾಕಿದ್ದೆ, ನನ್ನ ಸ್ಥಿತಿ ನೋಡಿ ನನಗೆ ನಾಚಿಕೆಯಾಯಿತು ಎಂದು ಎರಡು ಮಕ್ಕಳ ತಾಯಿ ಕರೆನಾ ವಿರ್ಜಿನಾ ನ್ಯೂಯಾರ್ಕ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡಿದ್ದಾರೆ.

ಆದರೆ ಟ್ರಂಪ್ ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ಅಲ್ಲಗಳೆದಿದ್ದಾರೆ, ಮಹಿಳೆಯರ ಜೊತೆ ನಾನು ಎಂದೂ ಅಸಭ್ಯವಾಗಿ ವರ್ತಿಸಿಲ್ಲ, ನನ್ನಷ್ಟು ಬೇರೆ ಯಾರು ಮಹಿಳೆಯರಿಗೆ ಗೌರವ ನೀಡುವುದಿಲ್ಲ, ಇದೆಲ್ಲಾ ಸುಳ್ಳು...ಸುಳ್ಳು... ಸುಳ್ಳು ಎಂದು ಲಾಸ್ ವೆಗಾಸ್ ನಲ್ಲಿ ನಡೆದ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಮೂರನೇ ಹಾಗೂ ಅಂತಿಮ ಚರ್ಚೆಯಲ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು