ವಿಷಕಾರಿ ಅನಿಲದಿಂದ ಪಾರಾಗಲು ಮಾಸ್ಕ್ ತೊಟ್ಟ ಯೋಧರು (ಎಎಫ್ ಪಿ ಚಿತ್ರ) 
ವಿದೇಶ

ಮೈತ್ರಿ ಪಡೆಗಳ ಪ್ರಾಬಲ್ಯ ತಡೆಯಲು ಸಲ್ಫರ್ ಮೈನಿಂಗ್ ಗೆ ಬೆಂಕಿ ಇಟ್ಟ ಇಸಿಸ್ ಉಗ್ರರು!

ಪ್ರಮುಖ ಬೆಳವಣಿಗೆಯೊಂದರಲ್ಲಿ ಇರಾಕ್ ನ ಮೊಸುಲ್ ನಗರದಲ್ಲಿ ಪಾರಮ್ಯ ಮೆರೆಯುತ್ತಿರುವ ಅಮೆರಿಕ ನೇತೃತ್ವದ ಮಿತ್ರಪಡೆಗಳನ್ನು ತಡೆಯುವ ನಿಟ್ಟಿನಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ಇಡೀ ಸಲ್ಫರ್ ಮೈನಿಂಗ್ ಪ್ರದೇಶಕ್ಕೆ ಬೆಂಕಿ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೊಸುಲ್: ಪ್ರಮುಖ ಬೆಳವಣಿಗೆಯೊಂದರಲ್ಲಿ ಇರಾಕ್ ನ ಮೊಸುಲ್ ನಗರದಲ್ಲಿ ಪಾರಮ್ಯ ಮೆರೆಯುತ್ತಿರುವ ಅಮೆರಿಕ ನೇತೃತ್ವದ ಮಿತ್ರಪಡೆಗಳನ್ನು ತಡೆಯುವ ನಿಟ್ಟಿನಲ್ಲಿ ಇಸ್ಲಾಮಿಕ್ ಸ್ಟೇಟ್  ಉಗ್ರರು ಇಡೀ ಸಲ್ಫರ್ ಮೈನಿಂಗ್ ಪ್ರದೇಶಕ್ಕೆ ಬೆಂಕಿ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೊಸುಲ್ ನಗರದಲ್ಲಿ ಪ್ರಬಲವಾಗಿ ದಾಳಿ ನಡೆಸುತ್ತಿರುವ ಅಮೆರಿಕದ ಮಿತ್ರಪಡೆಗಳ ಸಾಮರ್ಥ್ಯವನ್ನು ಕುಗ್ಗಿಸುವ ಸಲುವಾಗಿ ಇಸ್ಲಾಮಿಕ್ ಸ್ಟೇಟ್ ಉಗ್ರರು ಸಲ್ಫರ್ ಮೈನಿಂಗ್ ಗೆ ಬೆಂಕಿ ಇಟ್ಟಿದ್ದಾರೆ  ಎಂದು ತಿಳಿದುಬಂದಿದೆ. ಇದರಿಂದಾ ಸುತ್ತಮುತ್ತಲಿನ ಸುಮಾರು 6 ಕಿ.ಮೀ ವ್ಯಾಪ್ತಿಯಲ್ಲಿ ದಟ್ಟ ಹೊಗೆ ಆವರಿಸಿದ್ದು, ಸಲ್ಫರ್ ಸುಟ್ಟ ಹೊಗೆಯಿಂದಾಗಿ ಉಸಿರಾಡಲೂ ಕಷ್ಟಕರವಾದ ಪರಿಸ್ಥಿತಿ  ಯೋಧರಿಗೆ ಎದುರಾಗಿದೆ. ಪ್ರಸ್ತುತ ತಮ್ಮನ್ನು ತಾವು ವಿಷಕಾರಿ ಅನಿಲದಿಂದ ತಪ್ಪಿಸಿಕೊಳ್ಳಲು ಯೋಧರು ಮಾಸ್ಕ್ ಹಾಗೂ ಆ್ಯಂಟಿ ಸ್ಮೋಕ್ ಹೆಲ್ಮೆಟ್ ಗಳನ್ನು ಧರಿಸಿ ಯುದ್ಧ ಮಾಡುತ್ತಿದ್ದಾರೆ.

ಶನಿವಾರ ಸಂಜೆ ವೇಳೆಗೆ ಅಮೆರಿಕದ ಮಿತ್ರ ಪಡೆಗಳು ಮೊಸಲ್ ನಗರವನ್ನು ಸುತ್ತುವರೆಯುತ್ತಿದ್ದಂತೆಯೇ ನಗರದಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಮಿಶ್ರಾಖ್ ಸಲ್ಫರ್ ಮೈನಿಂಗ್ ಗೆ  ಬೆಂಕಿ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲಿದ್ದ ಇಂಧನ ಟ್ಯಾಂಕ್ ಗಳಿಗೆ ಬೆಂಕಿ ಇಟ್ಟು, ಬಾಂಬ್ ಗಳನ್ನು ಸ್ಫೋಟಿಸಿರುವ ಉಗ್ರರು, ಗೋದಾಮಿಗೂ ಬೆಂಕಿ ಇಟ್ಟಿದ್ದಾರೆ ಎಂದು ಅಧಿಕಾರಿಗಳು  ತಿಳಿಸಿದ್ದಾರೆ.

ಇನ್ನು ಅಮೆರಿಕ ನೇತೃತ್ವದ ಮಿತ್ರಪಡೆಗಳ ಡ್ರೋಣ್ ದಾಳಿ ಮುಂದುವರೆದಿದ್ದು, ದಾಳಿಯಿಂದ ಕಂಗೆಟ್ಟಿರುವ ಉಗ್ರರು ಸೈನಿಕರನ್ನು ಹಿಮ್ಮೆಟ್ಟಿಸುವ ಸಲುವಾಗಿ ಈ ಕೃತ್ಯವೆಸಗಿದ್ದಾರೆ ಎಂದು  ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಕೋಟಿ ಕೋಟಿ ಲೂಟಿ: ಅರಣ್ಯ ಇಲಾಖೆ ಮಾಜಿ ಅಧಿಕಾರಿಗೆ ಕೋರ್ಟ್ ಶಾಕ್; ಬರೋಬ್ಬರಿ 1.38 ಕೋಟಿ ದಂಡ, 3 ವರ್ಷ ಜೈಲು ಶಿಕ್ಷೆ..!