ವಿದೇಶ

ಸಿರಿಯಾ ಶಾಲೆ ಹೊರಗಡೆ ವಾಯು ದಾಳಿ, ಕನಿಷ್ಠ 17 ಸಾವು

Lingaraj Badiger
ಬೀರುತ್: ಬಂಡುಕೋರರ ವಶದಲ್ಲಿರುವ ಉತ್ತರ ಸಿರಿಯಾದ ಶಾಲೆಯೊಂದರ ಮೇಲೆ ಬುಧವಾರ ವಾಯುದಾಳಿ ನಡೆದಿದ್ದು, ದಾಳಿಯಲ್ಲಿ ಕನಿಷ್ಠ 17 ಮಂದಿ ಮೃತಪಟ್ಟಿದ್ದಾರೆ. ಮೃತರ ಪೈಕಿ ಬಹುತೇಕ ಮಕ್ಕಳಾಗಿದ್ದಾರೆ ಎಂದು ಸಿರಿಯಾದ ಕಾರ್ಯಕರ್ತರು ತಿಳಿಸಿದ್ದಾರೆ.
ಉತ್ತರ ಇದ್ಲಿಬ್ ನ ಹಾಸ್ಸ್ ಗ್ರಾಮದಲ್ಲಿ ಮಕ್ಕಳೆಲ್ಲರೂ ಶಾಲೆಯ ಹೊರಗಡೆ ಒಟ್ಟಿಗೆ ಸೇರಿದ ವೇಳೆ ಈ ವಾಯು ದಾಳೆ ನಡೆದಿದೆ ಎಂದು ಇದ್ಲಿಬ್ ನ್ಯೂಸ್ ನೆಟ್ ವರ್ಕ್ ವರದಿ ಮಾಡಿದೆ.
ದಾಳಿಯಲ್ಲಿ ಹಲವು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ.
SCROLL FOR NEXT