ಇಸ್ಲಾಮಾಬಾದ್: ನ್ಯಾಷನಲ್ ಜಿಯೋಗ್ರಾಫಿಕ್ಸ್ಖ್ಯಾತಿಯ ಬೆಕ್ಕಿನ ಕಣ್ಣುಗಳ(ಹಸಿರು ಕಣ್ಣು) ಬಾಲೆ ‘ಆಫ್ಘಾನ್ ಗರ್ಲ್’ ಶರ್ಬತ್ ಬೀಬಿಯನ್ನು ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸ್ (ಎಫ್ಐಎ) ಬುಧವಾರ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಂಪ್ಯೂಟರೀಕೃತ ರಾಷ್ಟ್ರೀಯ ಗುರುತಿನ ಚೀಟಿಯನ್ನು ನಕಲು ಮಾಡಿದ ಆರೋಪದ ಮೇಲೆ ಇಂದು ಬೀಬಿಯನ್ನು ಪೇಶಾವರದಲ್ಲಿ ಬಂಧಿಸಲಾಗಿದೆ ಎಂದು ಎಫ್ಐಎ ಮೂಲಗಳು ತಿಳಿಸಿವೆ.
ಬೀಬಿ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ಎರಡೂ ರಾಷ್ಟ್ರಗಳ ಪೌರತ್ವ ಹೊಂದಿದ್ದು, ಆಕೆಯ ಗುರುತಿನ ಚೀಟಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಡಾನ್ ಆನ್ ಲೈನ್ ವರದಿ ಮಾಡಿದೆ.
ನ್ಯಾಷನಲ್ ಜಿಯೋಗ್ರಾಫಿಕ್ ಫೊಟೋಗ್ರಾಫರ್ ಸ್ಟೀವ್ ಮೆಕ್ ಕರಿ 1984ರಲ್ಲಿ ಪೇಶಾವರ ಸಮೀಪದ ನಿರಾಶ್ರಿತರ ಶಿಬಿರದಲ್ಲಿ ಬೀಬಿಯ ಫೋಟೋ ಸೆರೆ ಹಿಡಿದಿದ್ದರು. ಈ ಫೋಟೋ ನ್ಯಾಷನಲ್ ಜಿಯೋಗ್ರಾಫಿಕ್ ನಿಯತಕಾಲಿಕದ 1985ರ ಜೂನ್ ಸಂಚಿಕೆಯಲ್ಲಿ ಮುಖಪುಟ ಚಿತ್ರವಾಗಿ ಪ್ರಕಟಗೊಂಡ ಬಳಿಕ ಈಕೆ ‘ಆಫ್ಘಾನ್ ಗರ್ಲ್’ ಎಂಬುದಾಗಿ ವಿಶ್ವಾದ್ಯಂತ ಖ್ಯಾತಿ ಪಡೆದಿದ್ದಳು. ಆಗ ಆಕೆಗೆ ಕೇವಲ 12 ವರ್ಷ ವಯಸ್ಸಾಗಿತ್ತು.
ಆಕೆಯ ಬದುಕಿನ ಬಗ್ಗೆ ಕಿರುಚಿತ್ರವನ್ನೂ ತಯಾರಿಸಿದ್ದ ನ್ಯಾಷನಲ್ ಜಿಯೋಗ್ರಾಫಿಕ್ ಆಕೆಯನ್ನು ‘ಆಫ್ಘಾನ್ ಯುದ್ಧದ ಮೋನಾ ಲಿಸಾ’ ಎಂಬುದಾಗಿ ಬಣ್ಣಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics