ಲಿಮಾ: 36 ವರ್ಷಗಳ ಹಿಂದೆ ಫ್ಲೋರಿಡಾ ಜೈಲಿನಿಂದ ಪರಾರಿಯಾಗಿದ್ದ ಕೈದಿಯೊಬ್ಬ ಪೆರುವಿನಲ್ಲಿ ಮತ್ತೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಡ್ರಗ್ ಮಾಫಿಯಾ ದಂಧೆಯಲ್ಲಿ ಬಂಧಿತನಾಗಿದ್ದ ರಿಕಾರ್ಡೋ ಗಾರ್ಸಿಯಾ ಎಂಬಾತ ಜೈಲಿನಿಂದ ಪರಾರಿಯಾಗಿ ತನ್ನ ಜೀವನದ ಅರ್ಧ ಆಯಸ್ಸು ಕಳೆದಿದ್ದಾನೆ.
ಪೆರುವಿಯಾನ್ ನಾಗರಿಕನಾದ ಈತ ಪೆರುವಿನ ರಾಜಧಾನಿ ಲಿಮಾದಲ್ಲಿ ವಾಕಿಂಗ್ ಮಾಡುತ್ತಿರಬೇಕಾಗದರೇ, ನೆರೆಹೊರೆವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
1979 ರಲ್ಲಿ ಅಮೆರಿಕಾ ನ್ಯಾಯಾಲಯ ಈತನಿಗೆ ಶಿಕ್ಷೆ ವಿಧಿಸಿತ್ತು. 12 ವರ್ಷ ಜೈಲಿನಲ್ಲಿ ಕಳೆದಿದ್ದ ಈತ ಪರಾರಿಯಾಗಿ ಸುಮಾರು ಮೂರವರೆ ದಶಕಗಳು ಹೊರಗಡೆ ಕಳೆದಿದ್ದಾನೆ.