ಕಕ್ಷೆಗೆ ಭೂ-ವೀಕ್ಷಣಾ ಉಪಗ್ರಹವನ್ನು ಸೇರಿಸುವಲ್ಲಿ ಚೀನಾ ವಿಫಲ?
ಭೂ-ವೀಕ್ಷಣಾ ಉಪಗ್ರಹವನ್ನು ಕಕ್ಷೆಗೆ ಸೇರಿಸುವಲ್ಲಿ ಚೀನಾ ವಿಫಲವಾಗಿದೆ ಎಂಬ ಸುದ್ದಿಯೊಂದು ವರದಿಯಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ವಿಶ್ವದ...
ಬೀಜಿಂಗ್: ಭೂ-ವೀಕ್ಷಣಾ ಉಪಗ್ರಹವನ್ನು ಕಕ್ಷೆಗೆ ಸೇರಿಸುವಲ್ಲಿ ಚೀನಾ ವಿಫಲವಾಗಿದೆ ಎಂಬ ಸುದ್ದಿಯೊಂದು ವರದಿಯಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ವಿಶ್ವದ ಮುಂದುವರಿದ ರಾಷ್ಟ್ರ ಎಂದು ಬೀಗುವ ಚೀನಾಗೆ ಭಾರೀ ಹಿನ್ನಡೆಯಾದಂತಿದೆ.
ಚೀನಾ ತಾನು ಉಡಾವಣೆ ಮಾಡಿದ್ದ ಉಪಗ್ರಹಗಳ ಪೈಕಿ ಇದೇ ಮೊದಲ ಬಾರಿಗೆ ವಿಫಲಗೊಂಡಿದೆ. ಶಾಂಕ್ಸಿ ನಗರದ ತೈಯಾನ್ ಉಡಾವಣಾ ಕೇಂದ್ರದಿಂದ ಉಪಗ್ರವನ್ನು ಹೊತ್ತ ಲಾಂಗ್ ಮಾರ್ಚ್ 4ಸಿ ರಾಕೆಟ್ ಉಪಗ್ರಹವನ್ನು ಕಕ್ಷೆಗೆ ಸೇರಿಸುವಲ್ಲಿ ವಿಫಲಗೊಂಡಿದೆ ಎಂದು ಚೀನಾದ ಪತ್ರಿಕೆಯೊಂದು ವರದಿಮಾಡಿದೆ.
ಉಪಗ್ರಹದ ಅವಶೇಷಗಳ ಹುಡುಕಾಟದ ಬಗೆಗಿನ ಫೋಟೋಗಳು ಚೀನಾದ ಟ್ವೀಟರ್ ಖಾತೆಯಲ್ಲಿ ತುಂಬಿ ಹೋಗಿದ್ದವು. ಆದರೆ ಕೆಲವೇ ಕ್ಷಣಗಳಲ್ಲಿ ಈ ಫೋಟೋಗಳನ್ನು ಟ್ವೀಟರ್ ನಿಂದ ಅಳಿಸಿ ಹಾಕಲಾಗಿದೆ.