ಸಾಂದರ್ಭಿಕ ಚಿತ್ರ 
ವಿದೇಶ

ಉತ್ತರ ಕೊರಿಯಾ ಪರಮಾಣು ಶಸ್ತ್ರಾಸ್ತ ಪರೀಕ್ಷೆ; ಗಂಭೀರ ಪರಿಣಾಮದ ಬಗ್ಗೆ ಅಮೆರಿಕಾ ಎಚ್ಚರಿಕೆ

ಉತ್ತರ ಕೊರಿಯಾ ಇತ್ತೀಚೆಗಷ್ಟೇ ಐದನೇ ಪರಮಾಣು ಶಸ್ತ್ರಾಸ್ತ್ರ ಪರೀಕ್ಷೆ ನಡೆಸಿರುವ ಹಿನ್ನಲೆಯಲ್ಲಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಗಂಭೀರ ಪರಿಣಾಮಗಳ ಎಚ್ಚರಿಕೆ ನೀಡಿದ್ದಾರೆ.

ವಾಶಿಂಗ್ಟನ್: ಉತ್ತರ ಕೊರಿಯಾ ಇತ್ತೀಚೆಗಷ್ಟೇ ಐದನೇ ಪರಮಾಣು ಶಸ್ತ್ರಾಸ್ತ್ರ ಪರೀಕ್ಷೆ ನಡೆಸಿರುವ ಹಿನ್ನಲೆಯಲ್ಲಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಗಂಭೀರ ಪರಿಣಾಮಗಳ ಎಚ್ಚರಿಕೆ ನೀಡಿದ್ದಾರೆ. 
ಈ ಪರಮಾಣು ಪರೀಕ್ಷೆ ಪ್ರಚೋದನೆ ಎಂದು ಕರೆದಿರುವ ಒಬಾಮಾ, ಏಶಿಯಾ ಮತ್ತು ವಿಶ್ವದಾದ್ಯಂತ ತಮ್ಮ ಮಿತ್ರ ದೇಶಗಳ ಭದ್ರತೆಗೆ ಅಮೆರಿಕಾ ಬದ್ಧವಾಗಿದೆ ಎಂದು ಮತ್ತೆ ಹೇಳಿದ್ದಾರೆ ಎಂದು ಶ್ವೇತ ಭವನದ ಹೇಳಿಕೆಯನ್ನು ಮಾಧ್ಯಮವೊಂದು ವರದಿ ಮಾಡಿದೆ. 
ಉತ್ತರ ಕೊರಿಯಾದಲ್ಲಿ ಪರಮಾಣು ಪರೀಕ್ಷೆಯಿಂದ ಉಂಟಾದ ಕೃತಕ ಭೂಕಂಪನದ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಸೂಸನ್ ರೈಸ್ ಬ್ರಿಫೆಡ್ ನಿಂದ ಮಾಹಿತಿ ಪಡೆದ ನಂತರ, ದಕ್ಷಿಣ ಕೊರಿಯಾ ಅಧ್ಯಕ್ಷ ಪಾರ್ಕ್ ಜಿಯುನ್-ಹೇ ಮತ್ತು ಜಪಾನ್ ಪ್ರಧಾನಿ ಶಿಸ್ನೋ ಅಬೆ ಜೊತೆಗೂ ದೂರವಾಣಿಯಲ್ಲಿ ಒಬಾಮಾ ಮಾತನಾಡಿದ್ದಾರೆ.
ಉತ್ತರ ಕೊರಿಯಾದ ಪ್ರಮುಖ ಪರಮಾಣು ಪರೀಕ್ಷಾ ಕೇಂದ್ರವಾದ ಪುಂಗ್ಯೆ-ರೀ ಬಳಿ ಸುಮಾರು ಬೆಳಗ್ಗೆ 9:30 ಕ್ಕೆ 5 ಅಂಶದ ತೀವ್ರತೆಯ ಕೃತಕ ಭೂಕಂಪನದ ಪತ್ತೆ ಹಚ್ಚಲಾಗಿತ್ತು. ಅಮೆರಿಕಾದ ಭೊನೈಸರ್ಗಿಕ ಸಮೀಕ್ಷಾ ಸಂಸ್ಥೆ 5.3 ತೀವ್ರತೆಯ ಭೂಕಂಪವಾಗಿರುವುದಾಗಿ ತಿಳಿಸಿದೆ. 
ಉತ್ತರ ಕೊರಿಯಾದ ಪ್ರಚೋದನೆಗೆ ಪ್ರತಿಕ್ರಿಯೆಯಾಗಿ ಒಬಾಮಾ ಮುಂದಿನ ದಿನಗಳಲ್ಲಿ ಮೈತ್ರಿ ದೇಶಗಳ ಜಿತೆಗೆ ಮಾತುಕತೆ ಮುಂದುವರೆಸಲಿದ್ದಾರೆ ಎಂದು ಹೇಳಿಕೆ ತಿಳಿಸಿದೆ. 
ಯಾವುದೇ ಪರಮಾಣು ಅಥವಾ ಕ್ಷಿಪಣಿ ಪರೀಕ್ಷೆ ನಡೆಸದಂತೆ ಉತ್ತರ ಕೊರಿಯಾಗೆ ವಿಶ್ವಸಂಸ್ಥೆ ನಿರ್ಬಂಧ ಹೇರಿದೆ. ಹೀಗಿದ್ದರೂ ಕಳೆದ ಜನವರಿಯಲ್ಲಿ ಉತ್ತರ ಕೊರಿಯಾ ನಾಲ್ಕನೇ ಪರಮಾಣು ಪರೀಕ್ಷೆಯನ್ನು ನಡೆಸಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

T20 World cup 2026: 'ಆಕ್ರಮಣಕಾರಿ ಶೈಲಿ ಮುಂದುವರಿಸಿ': ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಅನಿಲ್ ಕುಂಬ್ಳೆ ಎಚ್ಚರಿಕೆ

SCROLL FOR NEXT