ಅಮೆರಿಕಾದ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ 
ವಿದೇಶ

ಹಿಲರಿ ಕ್ಲಿಂಟನ್ ಗೆ ನ್ಯುಮೋನಿಯಾ; ಕ್ಯಾಲಿಫೋರ್ನಿಯಾ ಪ್ರಚಾರ ಪ್ರವಾಸ ರದ್ದು

ಅಮೆರಿಕಾದ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರು ನ್ಯುಮೋನಿಯಾದಿಂದ ಬಳಲುತ್ತಿರುವುದರಿಂದ ಸೋಮವಾರದಿಂದ ಪ್ರಾರಂಭವಾಗಬೇಕಿದ್ದ

ನ್ಯೂಯಾರ್ಕ್: ಅಮೆರಿಕಾದ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರು ನ್ಯುಮೋನಿಯಾದಿಂದ ಬಳಲುತ್ತಿರುವುದರಿಂದ ಸೋಮವಾರದಿಂದ ಪ್ರಾರಂಭವಾಗಬೇಕಿದ್ದ ತಮ್ಮ ಎರಡು ದಿನಗಳ ಕ್ಯಾಲಿಫೋರ್ನಿಯಾ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. 
ಅವರು ಸ್ಯಾನ್ ಫ್ರಾನ್ಸಿಸ್ಕೋ ಮಾತು ಲಾಸೆಂಜಲಿಸ್ ನಲ್ಲಿ ಪ್ರಚಾರ ಸಭೆಗಳಲ್ಲಿ ಭಾಗವಹಿಸಬೇಕಿತ್ತು. ಈಗ ವೈದ್ಯರು ಕ್ಲಿಂಟನ್ ಅವರಿಗೆ ವಿಶ್ರಾಂತಿ ಸೂಚಿಸಿರುವುದರಿಂದ ಈ ಪ್ರವಾಸ ರದ್ದಾಗಿದೆ. 
ಅಧ್ಯಕ್ಷೀಯ ಅಭ್ಯರ್ಥಿ ಗುಣಮುಖರಾಗುತ್ತಿದ್ದಾರೆ ಎಂದು ಮಾಜಿ ಕಾರ್ಯದರ್ಶಿಯವರ ವೈದ್ಯೆ ಲೀಸಾ ಆರ್ ಬರ್ಡಾಕ್ ಹೇಳಿದ್ದಾರೆ. 
ಭಾನುವಾರ ನಡೆಯುತ್ತಿದ್ದ ಅಮೆರಿಕಾ ಸೆಪ್ಟೆಂಬರ್ ದಾಳಿಯ ವಾರ್ಷಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕ್ಲಿಂಟನ್, ಅನಾರೋಗ್ಯದಿಂದ ಕಾರ್ಯಕ್ರಮ ಮುಗಿಯುವುದಕ್ಕೂ ಮುಂಚಿತವಾಗಿಯೇ ತೆರಳಿದ್ದರು. 
ಈ ಮಧ್ಯೆ ವಾಷಿಂಗ್ಟನ್ ಪೋಸ್ಟ್/ಎಬಿಸಿ ನಡೆಸಿರುವ ಸಮೀಕ್ಷೆಯಲ್ಲಿ ಹಿಲರಿ ಕ್ಲಿಂಟನ್ ತಮ್ಮ ರಾಜಕೀಯ ವಿರೋಧಿ ಡೊನಾಲ್ಡ್ ಟ್ರಂಪ್ ಗಿಂತಲೂ ಅಧ್ಯಕ್ಷ ಚುನಾವಣೆಯಲ್ಲಿ 5% ಮುಂದಿದ್ದಾರೆ ಎಂದಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವೇನ್ ಮುಚ್ಚೋದು ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ- ಇರಾನ್ ಗೆ ಟ್ರಂಪ್ ಶಾಕ್!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್; KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

ಮಿಸ್ಟರ್ 'ನಂಗ್ ಗೊತ್ತಿಲ್ಲಾ' ಗೃಹ ಸಚಿವರೇ.. ಇಲ್ನೋಡಿ, ಪುಡಿ ರೌಡಿಗಳ ಹಾವಳಿ: ಪರಮೇಶ್ವರ್ ವಿರುದ್ಧ ಜೆಡಿಎಸ್ ಕಿಡಿ

IPL 2026: ಬಟ್ಲರ್ 14,000 ರನ್ ದಾಖಲೆ; ಮಿಂಚಿದ ಶುಭ್ಮನ್ ಗಿಲ್, ಪ್ರಸಿದ್ಧ್ ಕೃಷ್ಣ; LSG ವಿರುದ್ಧ GT ಗೆಲುವು!

SCROLL FOR NEXT