ರಷ್ಯಾ ಸೇನೆ( ಸಂಗ್ರಹ ಚಿತ್ರ) 
ವಿದೇಶ

ಪಾಕಿಸ್ತಾನ- ರಷ್ಯಾದ ಜಂಟಿ ಸೇನಾ ತಾಲೀಮು: ಭಾರತ ಆತಂಕ ಪಡುವ ಅಗತ್ಯವಿಲ್ಲ ಎಂದ ರಷ್ಯಾ

ಪಾಕಿಸ್ತಾನ- ರಷ್ಯಾದ ಜಂಟಿ ಸೇನಾ ತಾಲೀಮಿನ ಬಗ್ಗೆ ಭಾರತ ಆತಂಕ ಪಡುವ ಅಗತ್ಯವಿಲ್ಲ ಎಂದು ರಷ್ಯಾದ ಹಿರಿಯ ರಾಜತಾಂತ್ರಿಕ ಅಧಿಕಾರಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಮಾಸ್ಕೋ: ಪಾಕಿಸ್ತಾನ- ರಷ್ಯಾದ ಜಂಟಿ ಸೇನಾ ತಾಲೀಮಿನ ಬಗ್ಗೆ ಭಾರತ ಆತಂಕ ಪಡುವ ಅಗತ್ಯವಿಲ್ಲ ಎಂದು ರಷ್ಯಾದ ಹಿರಿಯ ರಾಜತಾಂತ್ರಿಕ ಅಧಿಕಾರಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಉತ್ತರ ಪಾಕಿಸ್ತಾನದಲ್ಲಿ ನಡೆಸಲು ಉದ್ದೇಶಿಸಲಾಗಿರುವ ಪಾಕ್- ರಷ್ಯಾದ ಜಂಟಿ ಸೇನಾ ತಾಲೀಮು ವಿವಾದಿತ ಪ್ರದೇಶದಲ್ಲಿ ನಡೆಯುತ್ತಿಲ್ಲ. ಆದ್ದರಿಂದ ಭಾರತ ಈ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ರಷ್ಯಾದ ವಿದೇಶಾಂಗ ಇಲಾಖೆಯ ನಿರ್ದೇಶಕ ಜಮೀರ್ ಕಬುಲೊವ್ ತಿಳಿಸಿದ್ದಾರೆ.

ಪಾಕ್- ರಷ್ಯಾದ ಜಂಟಿ ಸೇನಾ ತಾಲೀಮನ್ನು ಫ್ರೆಂಡ್ಶಿಪ್- 2016 ಎಂದು ಹೆಸರಿಸಲಾಗಿದ್ದು, ಯುದ್ಧತಂತ್ರದ ಅಭ್ಯಾಸ ಸೆಪ್ಟೆಂಬರ್ 24 ರಿಂದ ಅಕ್ಟೊಬರ್ 7 ವರೆಗೆ ನಡೆಯಲಿದೆ. ಭಾರತ- ಪಾಕಿಸ್ತಾನದ ವಿವಾದಿತ ಪ್ರದೇಶದಲ್ಲಿ ಈ ಸೇನಾ ಅಭ್ಯಾಸ ನಡೆಸುತ್ತಿಲ್ಲ. ಆದ್ದರಿಂದ ಭಾರತ ಆತಂಕ ಪಡುವುದಕ್ಕೆ ಕಾರಣಗಳಿಲ್ಲ ಅಲ್ಲದೆ, ರಷ್ಯಾ ಈ ಜಂಟಿ ಸೇನಾ ತಾಲೀಮು ನಡೆಯುವ ಪ್ರದೇಶದ ಬಗ್ಗೆ ಈ ಹಿಂದೆಯೇ ಭಾರತಕ್ಕೆ ಮಾಹಿತಿ ನೀಡಿತ್ತು ಎಂದು ಜಮೀರ್ ಕಬುಲೊವ್ ತಿಳಿಸಿದ್ದಾರೆ.

ಜಂಟಿ ಸೇನಾ ತಾಲೀಮಿನಲ್ಲಿ 200 ಸೇನಾ ಸಿಬ್ಬಂದಿ ಭಾಗವಹಿಸಲಿದ್ದು, ಪಾಕಿಸ್ತಾನ- ರಷ್ಯಾ ನಡುವಿನ ದ್ವಿಪಕ್ಷೀಯ ಸಹಕಾರವನ್ನು ವೃದ್ಧಿಗೊಳಿಸುವುದಕ್ಕೆ ಅನುಕೂಲವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಪಾಕಿಸ್ತಾನ ರಷ್ಯಾದ ಯುದ್ಧ ವಿಮಾನಗಳನ್ನು ಖರೀದಿಸಲು ಚಿಂತನೆ ನಡೆಸಿರುವ ಸಂದರ್ಭದಲ್ಲಿ ಜಂಟಿ ಸೇನಾ ತಾಲೀಮು ನಡೆಯುತ್ತಿರುವುದು ಮಹತ್ವ ಪಡೆದುಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel