ವಿದೇಶ

ಅಮೆರಿಕಾದೊಂದಿಗೆ ಸೌರಶಕ್ತಿ ವಿವಾದ: ಡಬ್ಲ್ಯೂಟಿಒದಲ್ಲಿ ಭಾರತಕ್ಕೆ ಹಿನ್ನಡೆ

Srinivas Rao BV

ಜಿನೀವಾ: ಭಾರತದ ಸೌರಶಕ್ತಿ ಕ್ಷೇತ್ರದಲ್ಲಿನ ನೀತಿಗಳು ವಿಶ್ವ ವಾಣಿಜ್ಯ ಕೇಂದ್ರದ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದ್ದ ಅಮೆರಿಕಾ ವಾದವನ್ನು ಡಬ್ಲ್ಯೂಟಿಒ ಪುರಸ್ಕರಿಸಿದೆ.

ಸೌರಶಕ್ತಿ ಕ್ಷೇತ್ರಕ್ಕೆ ಸಂಬಂಧಿಸಿದ ಸೌರಕೋಶ( ಸೋಲಾರ್ ಸೆಲ್) ಸೌರಸಾಧನ (ಸೋಲಾರ್ ಮಾಡ್ಯೂಲ್) ಗಳನ್ನು ಉತ್ಪಾದಿಸಲು ಭಾರತ ಸ್ಥಳೀಯ ಉತ್ಪಾದಕರನ್ನು ಉತ್ತೇಜಿಸುತ್ತಿರುವುದರ ವಿರುದ್ಧ ಅಮೆರಿಕ ಡಬ್ಲ್ಯೂಟಿಸಿಯಲ್ಲಿ ದೂರು ದಾಖಲಿಸಿತ್ತು. ಈ ಬಗ್ಗೆ ವಿಚಾರಣೆ ನಡೆಸಿರುವ ಡಬ್ಲ್ಯೂಟಿಒದ ಮೇಲ್ಮನವಿ ನ್ಯಾಯಾಲಯ, ಭಾರತ ಸೌರಕೋಶ ಸೌರಸಾಧನಗಳಿಗಾಗಿ ಆಮದುದಾರರು ಹಾಗೂ ಸ್ಥಳೀಯ ಉತ್ಪಾದಕರ ನಡುವೆ ತಾರತಮ್ಯ ತೋರುತ್ತಿದ್ದು, ಇದು ಡಬ್ಲ್ಯೂಟಿಒ ನಿಯಮಗಳ ಉಲ್ಲಂಘನೆ ಎಂದು ಹೇಳಿದೆ.

ಡಬ್ಲ್ಯೂಟಿಒ ತೀರ್ಪಿನಿಂದ ಅಮೇರಿಕಾದ ಸೋಲಾರ್ ಉಪಕರಣಗಳ ಉತ್ಪಾದಕರು ಹಾಗೂ ನೌಕರರಿಗೆ ಅನುಕೂಲವಾಗಲಿದ್ದು, ದೀರ್ಘಾವಧಿಯಲ್ಲಿ ಹವಾಮಾನ ಬದಲಾವಣೆ ವಿಚಾರದಲ್ಲಿನ ಹೋರಾಟಕ್ಕೆ ಅಮೆರಿಕಾ ಮತ್ತೊಂದು ಹೆಜ್ಜೆ ಮುಂದಿರುವಂತೆ ಮಾಡಲಿದೆ ಎಂದು ಅಮೆರಿಕದ ವಾಣಿಜ್ಯ ಪ್ರತಿನಿಧಿ ಮೈಕೆಲ್ ಫ್ರೋಮನ್ ಹೇಳಿಕೆ ನೀಡಿದ್ದಾರೆ.

ಡಬ್ಲ್ಯೂಟಿಒ ದಲ್ಲಿ ಭಾರತಕ್ಕೆ ಹಿನ್ನಡೆಯುಂಟಾಗಿರುವ ಬಗ್ಗೆ ಭಾರತದ ಅಧಿಕಾರಿಗಳು ಈ ವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸೌರಶಕ್ತಿ ಕ್ಷೇತ್ರದಲ್ಲಿ ಅಗತ್ಯವಿರುವ ಸೌರಕೋಶ ಹಾಗೂ ಸಾಧನಗಳನ್ನು ಆಮದು ಮಾಡಿಕೊಳ್ಳುವ ಬದಲು ಸಾಧನಗಳ ಉತ್ಪಾದನೆಗೆ  ಭಾರತ ಸ್ಥಳೀಯ ಉತ್ಪಾದಕರನ್ನು ಉತ್ತೇಜಿಸುವ ನೀತಿ ರೂಪಿಸಿತ್ತು. ಪರಿಣಾಮವಾಗಿ ಭಾರತಕ್ಕೆ ಅಮೆರಿಕದ ಶೇ.90 ರಷ್ಟು ಆಮದು ಸ್ಥಗಿತಗೊಂಡು, ಅಮೆರಿಕದ ರಫ್ತು ಪ್ರಮಾಣಕ್ಕೆ ಹೊಡೆತ ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಭಾರತದ ಕ್ರಮವನ್ನು ಪ್ರಶ್ನಿಸಿ ಅಮೆರಿಕ 2016 ರ ಏಪ್ರಿಲ್ ನಲ್ಲಿ ಡಬ್ಲ್ಯೂಟಿಒಗೆ ಮೇಲ್ಮನವಿ ಸಲ್ಲಿಸಿತ್ತು. ಇದಕ್ಕೂ ಮುನ್ನ ಭಾರತ ಅಮೆರಿಕದ 8 ರಾಜ್ಯಗಳಲ್ಲಿ ಸೌರಶಕ್ತಿ ಕೈಗಾರಿಕೆಗಳಿಗೆ ಸಬ್ಸಿಡಿ ನೀಡಿರುವುದನ್ನು ವಿರೋಧಿಸಿ ಡಬ್ಲ್ಯೂಟಿಒ ಗೆ ದೂರು ದಾಖಲಿಸಿತ್ತು. ಆದರೆ ತನ್ನ ವಿರುದ್ಧ ಬಂದ ತೀರ್ಪಿನ್ನು ಪ್ರಶ್ನಿಸಿ ಅಮೆರಿಕ ಮೇಲ್ಮನವಿ ಸಲ್ಲಿಸಿತ್ತು.

SCROLL FOR NEXT