ಅಮೆರಿಕ ಕಾಂಗ್ರೆಸ್( ಸಂಗ್ರಹ ಚಿತ್ರ) 
ವಿದೇಶ

ಪಾಕಿಸ್ತಾನ ತೀವ್ರವಾದಿ ಜಿಹಾದಿ ಆಡಳಿತ ನಡೆಸುತ್ತಿದೆ: ಅಮೆರಿಕ ಸಂಸದ

ಪಾಕಿಸ್ತಾನ ತೀವ್ರವಾದಿ ಜಿಹಾದಿ ಆಡಳಿತ ನಡೆಸುತ್ತಿದೆ ಎಂದು ಅಮೆರಿಕ ಸಂಸದರೋಬ್ಬರು ಎಚ್ಚರಿಸಿದ್ದು, ಇದನ್ನೇ ಮುಂದುವರೆಸಿದರೆ 1971 ರಲ್ಲಿ ನಡೆದ ಪಾಕಿಸ್ತಾನ ವಿಭಜನೆ ಮತೊಮ್ಮೆ ನಡೆಯಬಹುದಾದ ಸಂಭವವಿದೆ ಎಂದು ಎಚ್ಚರಿಸಿದ್ದಾರೆ.

ವಾಷಿಂಗ್ ಟನ್: ಪಾಕಿಸ್ತಾನ ತೀವ್ರವಾದಿ ಜಿಹಾದಿ ಆಡಳಿತ ನಡೆಸುತ್ತಿದೆ ಎಂದು ಅಮೆರಿಕ ಸಂಸದರೋಬ್ಬರು ಎಚ್ಚರಿಸಿದ್ದು, ಇದನ್ನೇ ಮುಂದುವರೆಸಿದರೆ 1971 ರಲ್ಲಿ ನಡೆದ ಪಾಕಿಸ್ತಾನ ವಿಭಜನೆ ಮತೊಮ್ಮೆ ನಡೆಯಬಹುದಾದ ಸಂಭವವಿದೆ ಎಂದು ಎಚ್ಚರಿಸಿದ್ದಾರೆ.

ಬೇರೆ ಸಂಸ್ಕೃತಿಗಳ ಮೇಲೆ ದಾಳಿ ನಡೆಸಿ ಪಾಕಿಸ್ತಾನವನ್ನು ಸುಭದ್ರವಾಗಿ ಉಳಿಸಿಕೊಳ್ಳಬಹುದು ಎಂಬ ಭಾವನೆಯಲ್ಲಿರುವವರು ಢಾಕೆಗೆ ಒಮ್ಮೆ ಭೇಟಿ ನೀಡಬೇಕು ಎಂದು ಅಮೆರಿಕ ಸಂಸದ ಬ್ರಾಡ್ ಶೆರ್ಮನ್ ಸಲಹೆ ನೀಡಿದ್ದಾರೆ. ಸಿಂಧಿ ಫೌಂಡೇಶನ್ ನ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಶೆರ್ಮನ್, ಪಾಕಿಸ್ತಾನದ ಸರ್ಕಾರಗಳು, ಪ್ರಮುಖವಾಗಿ ಈಗಿನ ಸರ್ಕಾರ ಸಿಂಧಿಯ ಶ್ರೀಮಂತರ ಸಂಸ್ಕೃತಿಯನ್ನು ವ್ಯವಸ್ಥಿತವಾಗಿ ನಾಶ ಮಾಡಲು ಯತ್ನಿಸಿವೆ ಎಂದು ಹೇಳಿದ್ದಾರೆ. ಸಿಂಧಿಗಳ ಸಂಸ್ಕೃತಿ, ಭಾಷೆಯನ್ನು ನಾಶ ಮಾಡಲು ಪಾಕಿಸ್ತಾನ ಆಡಳಿತವನ್ನು ಬಳಸಿಕೊಳ್ಳುತ್ತಿದೆ, ಪಾಕಿಸ್ತಾನ ಒಂದು ವೇಳೆ ತಾನು ಬೇರೆ ಸಂಸ್ಕೃತಿಗಳನ್ನು ನಾಶಗೊಳಿಸಿ ತನ್ನ ಪ್ರಾಂತ್ಯವನ್ನು ವಿಸ್ತರಿಸಬಹುದು ಎಂದುಕೊಳ್ಳುತ್ತಿದ್ದರೆ ಢಾಕಾವನ್ನೊಮ್ಮೆ ನೋಡಲಿ ಎಂದು ಹೇಳುವ ಮೂಲಕ ಪಾಕಿಸ್ತಾನ ಭಯೋತ್ಪಾದನೆಯನ್ನು ಮುಂದುವರೆಸಿದರೆ ಮತ್ತೊಂದು ವಿಭಜನೆ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂಬ ಸಂದೇಶ ನೀಡಿದ್ದಾರೆ ಅಮೆರಿಕ ಸಂಸದ ಬ್ರಾಡ್ ಶೆರ್ಮನ್.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT