ಡೊನಾಲ್ಡ್ ಟ್ರಂಪ್ 
ವಿದೇಶ

ಇಸೀಸ್ ಬೆಳವಣಿಗೆಗೆ ಹಿಲರಿ ಕ್ಲಿಂಟನ್ ನ್ನು ದೂಷಿಸಿದ ಡೊನಾಲ್ಡ್ ಟ್ರಂಪ್

ಅಮೆರಿಕ ಅಧ್ಯಕ್ಷೀಯ ಚುನಾವಣಾ ಹಿನ್ನೆಲೆಯಲ್ಲಿ, ಸೆ.26 ರಂದು ನ್ಯೂಯಾರ್ಕ್ ನಲ್ಲಿ ಅಭ್ಯರ್ಥಿಗಳ ನಡುವೆ ಮೊದಲ ಮುಖಾಮುಖಿ ಚರ್ಚೆ ನಡೆದಿದೆ.

ನ್ಯೂಯಾರ್ಕ್:ಅಮೆರಿಕ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ, ಸೆ.26 ರಂದು ನ್ಯೂಯಾರ್ಕ್ ನಲ್ಲಿ ಅಭ್ಯರ್ಥಿಗಳ ನಡುವೆ ಮೊದಲ ಮುಖಾಮುಖಿ ಚರ್ಚೆ ನಡೆದಿದೆ.

ಚರ್ಚೆಯಲ್ಲಿ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹಿಲರಿ ಕ್ಲಿಂಟನ್ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಇಸ್ಲಾಮಿಕ್ ಸ್ಟೇಟ್ ನ ಬೆಳವಣಿಗೆಗೆ ಹಿಲರಿ ಕ್ಲಿಂಟನ್ ಕಾರಣ ಎಂದು ಹೇಳಿದ್ದಾರೆ. ಮುಂದಿನ ಯೋಜನೆಗಳನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸುವ ಮೂಲಕ ಇಸೀಸ್ ನ ಬೆಳವಣಿಗೆಗೆ ಹಿಲರಿ ಕ್ಲಿಂಟನ್ ಒಂದು ರೀತಿಯಲ್ಲಿ ಕಾರಣರಾಗಿದ್ದಾರೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ವೆಬ್ ಸೈಟ್ ನಲ್ಲಿ ಕಾರ್ಯತಂತ್ರಗಳನ್ನು ಪ್ರಕಟಿಸಿರುವ ಹಿಲರಿ ಕ್ಲಿಂಟನ್ ಅವರ ಕ್ರಮವನ್ನು ತೀವ್ರವಾಗಿ ವಿರೋಧಿಸಿರುವ ಡೊನಾಲ್ಡ್ ಟ್ರಂಪ್, ಶತೃಗಳನ್ನು ನಿರ್ಮೂಲನೆ ಮಾಡಲು ರೂಪಿಸಿರುವ ಯೋಜನೆಗಳನ್ನು ನೀವು ಶತೃಗಳೊಂದಿಗೇ ಹಂಚಿಕೊಳ್ಳುತ್ತಿದ್ದೀರಿ, ಈ ರೀತಿ ಮಾಡುವುದರಿಂದ ನೀವು ಇಸೀಸ್ ಉಗ್ರ ಸಂಘಟನೆ ವಿರುದ್ಧ ಜೀವನವಿಡೀ ಹೋರಾಡಿದರೂ ಅದರಿಂದ ಪ್ರಯೋಜನವಾಗುವುದಿಲ್ಲ ಎಂದು ಡೊನಾಲ್ಡ್ ಟ್ರಂಪ್ ತಮ್ಮ ಪ್ರತಿಸ್ಪರ್ಧಿ ಹಿಲರಿ ಕ್ಲಿಂಟನ್ ಗೆ ಸಲಹೆ ನೀಡಿದ್ದಾರೆ.

ಅಮೇರಿಕಾದಲ್ಲಿ ಆಫ್ರಿಕಾದ ಅಮೆರಿಕನ್ನರು, ಹಿಸ್ಪಾನಿಕ್ಸ್ ಜನರು ನರಕ ಸದೃಶ ವಾತಾವರಣದಲ್ಲಿದ್ದಾರೆ, ಅಂತಹ ವಾತಾವರಣವನ್ನು ಹೋಗಲಾಡಿಸಲು ಕಾನೂನು ರೂಪಿಸಬೇಕು ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಗನ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂಬ ಹಿಲರಿ ಕ್ಲಿಂಟನ್ ಅವರ ಹೇಳಿಕೆಗೆ ಡೊನಾಲ್ಡ್ ಟ್ರಂಪ್ ಸಹಮತ ವ್ಯಕ್ತಪಡಿಸಿದ್ದಾರೆ. ನಮ್ಮ ಕೆಲಸಗಳನ್ನು ಬೇರೆಯವರು ತೆಗೆದುಕೊಳ್ಳುವುದನ್ನು ತಡೆಗಟ್ಟಬೇಕು ಎಂದಿರುವ ಡೊನಾಲ್ಡ್ ಟ್ರಂಪ್, ಅಮೆರಿಕದಿಂದ ಹೊರ ನಡೆಯುತ್ತಿರುವ ಕಂಪನಿಗಳನ್ನು ತಡೆಯಬೇಕು ಇದೆ ವೇಳೆ ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Jantar Mantar ಬಳಿ ಭಾರೀ ಹೈಡ್ರಾಮಾ: ಬ್ಯಾರಿಕೇಡ್ ದಾಟಿದ CJP ನಾಯಕರು ಪೊಲೀಸ್ ವಶಕ್ಕೆ; ಪ್ರತಿರೋಧ ನಿಷೇಧ ಸಾಧ್ಯವಿಲ್ಲ-ಕೇಂದ್ರದ ವಿರುದ್ಧ ದೀಪ್ಕೆ ಆಕ್ರೋಶ

‘ಪ್ರತಿಭಟನೆ ನಮ್ಮ ಹಕ್ಕು, ಬಂಧನಗಳಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ’: ದೇಶಾದ್ಯಂತ ಚಳವಳಿ ವಿಸ್ತರಿಸಲು Cockroach Janta Party ಪಣ (INTERVIEW)

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು

SC/ST ಮೀಸಲಾತಿ ಹೆಚ್ಚಳ ರದ್ದು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಬಿಗ್ ಶಾಕ್, ಭಾರೀ ಹಿನ್ನಡೆ..!

ಕಾವೇರಿ ಕಗ್ಗಂಟು: "ಕುಡಿಯಲು ನಮಗೇ ನೀರಿಲ್ಲ, ತಮಿಳುನಾಡಿಗೆ ಕೊಡೋದು ಹೇಗೆ..?" ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಾದ..!