ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಶ್ರೀಲಂಕಾದಲ್ಲಿ ಸರಕು ಸಾಗಾಣಿಕ ಹಡಗಿಗೆ ಬೆಂಕಿ, ನೆರವಿಗೆ ಧಾವಿಸಿದ ಭಾರತೀಯ ನೌಕಾಪಡೆ!

ಶ್ರೀಲಂಕಾದದಲ್ಲಿ ಸರಕು ಸಾಗಾಣಿಕ ಹಡಗಿನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಅಧಿಕಾರಿಗಳ ಮನವಿ ಮೇರೆಗೆ ಭಾರತೀಯ ನೌಕಾಪಡೆಯ ಎರಡು ನೌಕೆಗಳು ಕೊಲಂಬೋಗೆ ದೌಡಾಯಿಸಿವೆ.

ಅಗ್ನಿ ಅವಘಡಕ್ಕೀಡಾಗಿರುವ ಎಂವಿ ಡೇನಿಯಲಾ ನೌಕೆ
Srinivasa Murthy VN
Updated On : 5 Apr 2017, 11:19 am

ಕೊಲಂಬೋ: ಶ್ರೀಲಂಕಾದದಲ್ಲಿ ಸರಕು ಸಾಗಾಣಿಕ ಹಡಗಿನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಅಧಿಕಾರಿಗಳ ಮನವಿ ಮೇರೆಗೆ ಭಾರತೀಯ ನೌಕಾಪಡೆಯ ಎರಡು ನೌಕೆಗಳು ಕೊಲಂಬೋಗೆ ದೌಡಾಯಿಸಿವೆ.

ಶ್ರೀಲಂಕಾ ರಾಜಧಾನಿ ಕೊಲಂಬೋ ಬಂದರಿನಿಂದ ಸುಮಾರು 11 ನಾಟಿಕಲ್ ಮೈಲಿ ದೂರದಲ್ಲಿ ಕಾರ್ಗೋಶಿಪ್ ಎಂವಿ ಡೇನಿಯಲಾದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಲಂಕಾ ಸೇನೆ  ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದೆ. ಆದರೆ ಸತತ ಕಾರ್ಯಾಚರಣೆ ಬಳಿಕವೂ ಬೆಂಕಿ ಸಂಪೂರ್ಣವಾಗಿ ನಂದದೇ ಇರುವುದರಿಂದ ಲಂಕಾ ಅಧಿಕಾರಿಗಳು ಭಾರತೀಯ ನೌಕಾಪಡೆಯ ನೆರವು ಕೋರಿದ್ದಾರೆ. ಈ  ಹಿನ್ನಲೆಯಲ್ಲಿ ಭಾರತೀಯ ನೌತಾಪಡೆಯ ಎರಡು ನೌಕೆಗಳನ್ನು ಕಾರ್ಯಾಚರಣೆಗಾಗಿ ಕಳುಹಿಸಲಾಗಿದ್ದು, ಐಎನ್ಎಸ್ ಘರಿಯಲ್ ಹಾಗೂ ಐಎನ್ಎಸ್ ದರ್ಶಕ್ ನೌಕೆಗಳು ಘಟನಾ ಸ್ಥಳಕ್ಕೆ ದೌಡಾಯಿಸಿವೆ.

ಅಗ್ನಿ ಅವಘಡಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಭಾರತೀಯ ನೌಕಾಪಡೆಯ ವಕ್ತಾರ ಕ್ಯಾಪ್ಟನ್ ಡಿಕೆ ಶರ್ಮಾ ಅವರು, ಲಂಕಾ ನೌಕಾಪಡೆಯ ಅಧಿಕಾರಿಗಳ ಮನವಿ ಮೇರೆಗೆ ಐಎನ್ಎಸ್ ಘರಿಯಲ್, ಐಎನ್ಎಸ್ ದರ್ಶಕ್ ನೌಕೆಗಳನ್ನು  ಕಾರ್ಯಾಚರಣೆಗೆ ರವಾನಿಸಲಾಗಿದೆ. ಅಗ್ನಿ ಅವಘಡಕ್ಕೀಡಾಗಿರುವ ನೌಕೆ ರಾಜಧಾನಿ ಕೊಲಂಬೋದಿಂದ 11 ನಾಟಿಕಲ್ ಮೈಲು ದೂರದಲ್ಲಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments