ವಿವಾದಾತ್ಮಕ 'ರೇಸಿಸ್ಟ್' ಜಾಹೀರಾತು ಹಿಂಪಡೆದ ನಿವಿಯಾ ಸ್ಕಿನ್ ಕೇರ್
ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ವಿರೋಧ ವ್ಯಕ್ತವಾದ ನಂತರ ಜರ್ಮನ್ ನ ನಿವಿಯಾ ಸ್ಕಿನ್ ಕೇರ್ ಕಂಪನಿ ತಮ್ಮ ವಿವಾದಾತ್ಮಕ ರೇಸಿಸ್ಟ್ ಜಾಹೀರಾತನ್ನು ...
ನ್ಯೂಯಾರ್ಕ್: ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ವಿರೋಧ ವ್ಯಕ್ತವಾದ ನಂತರ ಜರ್ಮನ್ ನ ನಿವಿಯಾ ಸ್ಕಿನ್ ಕೇರ್ ಕಂಪನಿ ತಮ್ಮ ವಿವಾದಾತ್ಮಕ ರೇಸಿಸ್ಟ್ ಜಾಹೀರಾತನ್ನು ಹಿಂಪಡೆದಿದೆ.
ನಿವಿಯಾ ಡಿಯೋಡರೆಂಟ್ ಜಾಹೀರಾತಿನಲ್ಲಿ ಮಹಿಳೆಯ ಚಿತ್ರ ಬಳಸಿಕೊಂಡು "ವೈಟ್ ಪರಿಶುದ್ದವಾದದ್ದು." ಎಂಬ ಶ್ಲೋಗನ್ ಹಾಕಿಕೊಂಡಿತ್ತು.
ಮಧ್ಯಪ್ರಾಚ್ಯದ ಫೇಸ್ ಬುಕ್ ಪೇಜ್ ನಲ್ಲಿ ಈ ಜಾಹಿರಾತನ್ನು ಪ್ರಕಟಿಸಿ Keep it clean, keep it bright. Don't let anything ruin it ಎಂಬ ಶೀರ್ಷಿಕೆ ನೀಡಿತ್ತು.
ಈ ಪೋಸ್ಟ್ ನಂತರ ಜಾಹೀರಾತಿನಲ್ಲಿ ಜನಾಂಗೀಯ ತಾರತಮ್ಯ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ಷೇಪ ವ್ಯಕ್ತ ವಾಯಿತು. ಇದೇ ಮೊದಲಲ್ಲ, 2011 ರಲ್ಲೂ ನಿವಿಯಾ ಬ್ರ್ಯಾಂಡ್ ರೇಸಿಸ್ಟ್ ಜಾಹೀರಾತು ಪ್ರದರ್ಶಿಸಿ ನಂತರ ಕ್ಷಮೆಯಾಚಿಸಿತ್ತು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.