ಅರುಣಾಚಲ ಪ್ರದೇಶ: ಬೌದ್ಧ ಧರ್ಮ ಗುರು ದಲೈಲಾಮ ಅವರ ಉತ್ತರಾಧಿಕಾರಿಯನ್ನು ನೇಮಿಸಲು ಹವಣಿಸುತ್ತಿರುವ ಚೀನಾ ಬಗ್ಗೆ ದಲೈ ಲಾಮ ಅಸಮಾಧಾನ ವ್ಯಕ್ತಪಡಿಸಿದ್ದು, ಚೀನಾ ನನ್ನ ಉತ್ತರಾಧಿಕಾರಿಯನ್ನು ಹುಡುಕುತ್ತಿರುವುದು ಅಸಂಬದ್ಧ ಎಂದು ಹೇಳಿದ್ದಾರೆ.
ಕೆಲವು ವರ್ಷಗಳ ಹಿಂದೆ ಚೀನಾ ದಲೈಲಾಮ ಅವರಿಗೆ ಪ್ರತಿಯಾಗಿ ಮತ್ತೊಬ್ಬ ದಲೈ ಲಾಮ ಅವರನ್ನು ನೇಮಕ ಮಾಡಿತ್ತು. ಈ ಬಗ್ಗೆ ಚರ್ಚೆ ತೀವ್ರಗೊಂಡಿದ್ದು, ಚೀನಾ ತನ್ನದೇ ಆದ ಧರ್ಮ ಗುರುವನ್ನು ನೇಮಕ ಮಾಡಲು ಯತ್ನಿಸುತ್ತಿರುವುದರ ಬಗ್ಗೆ ದಲೈಲಾಮ ಪ್ರತಿಕ್ರಿಯಿಸಿದ್ದು, ನನ್ನ ಉತ್ತರಾಧಿಕಾರಿಗಾಗಿ ಚೀನಾ ಹುಡುಕಾಟ ಅಸಂಬದ್ಧ ಎಂದಿದ್ದಾರೆ.
ಇದಕ್ಕೂ ಮುನ್ನ ಇದೇ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ದಲೈ ಲಾಮ ತಮ್ಮ ಉತ್ತರಾಧಿಕಾರಿಯನ್ನು ನೇಮಕ ಮಾಡಲು ಯತ್ನಿಸುತ್ತಿರುವ ಚೀನಾದ್ದು ಮೂರ್ಖತನದ ನಡೆ ನಮ್ಮ ಮೆದುಳಿಗೆ ಸಾಮಾನ್ಯ ಜ್ಞಾನವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿದೆ. ಆದರೆ ಚೀನಾ ತೀವ್ರವಾದಿಗಳ ಮೆದುಳಿನ ಕೆಲ ಭಾಗಗಳು ಕಾಣೆಯಾಗಿವೆ ಎಂದಿದ್ದರು.