ಮಿನ್ ಬಹದ್ದೂರ್ ಶೆರ್ಚಾನ್ 
ವಿದೇಶ

85ನೇ ವಯಸ್ಸಿನಲ್ಲಿ ಮೌಂಟ್ ಎವರೆಸ್ಟ್ ಏರಿ ಮತ್ತೆ ದಾಖಲೆಗೆ ಮುಂದಾದ ನೇಪಾಳಿ

ಈಗಾಗಲೇ ಒಂದು ಬಾರಿ ಜಗತ್ತಿನ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರಿದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಗೌರವಕ್ಕೆ ಪಾತ್ರವಾಗಿರುವ....

ಕಠ್ಮಂಡು: ಈಗಾಗಲೇ ಒಂದು ಬಾರಿ ಜಗತ್ತಿನ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರಿದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಗೌರವಕ್ಕೆ ಪಾತ್ರವಾಗಿರುವ ನೇಪಾಳಿಯೊಬ್ಬರು ಈಗ ಆ ದಾಖಲೆಯನ್ನು ಮರಳಿ ಪಡೆಯುವುದಕ್ಕಾಗಿ  ಮತ್ತೆ 85ನೇ ವಯಸ್ಸಿನಲ್ಲಿ ಹಿಮಾಲಯ ಪರ್ವತವನ್ನೇರುವ ಸಾಹಸಕ್ಕೆ ಕೈಹಾಕಿದ್ದಾರೆ.
ನೇಪಾಳದ ಹಿರಿಯ ಪರ್ವತಾರೋಹಿ ಮಿನ್ ಬಹದ್ದೂರ್ ಶೆರ್ಚಾನ್ ಅವರು ಮುಂದಿನ ತಿಂಗಳು 8,850 ಮೀಟರ್ ಎತ್ತರದ ಮೌಂಟ್ ಎವರೆಸ್ಟ್ ಪರ್ವತ ಶಿಖರ ಏರಲು ಮುಂದಾಗಿದ್ದಾರೆ.
ಮೌಂಟ್ ಎವರೆಸ್ಟ್ ಏರಿದ ಅತ್ಯಂತ ಹಿರಿಯ ವ್ಯಕ್ತಿ ನಾನೆಯಾಗಬೇಕು ಎಂಬುದು ನನ್ನ ಬಯಕೆಯಾಗಿದ್ದು, ಇದು ಹಿರಿಯ ವ್ಯಕ್ತಿಗಳಿಗೆ ಒಂದು ಸ್ಪೂರ್ತಿ ಹಾಗೂ ಯುವಕರಿಗೆ ಪ್ರೋತ್ಸಾಹವಾಗಲಿದೆ ಎಂದು ಶೆರ್ಚಾನ್ ಅವರು ಇಂದು ತಮ್ಮ ನಿವಾಸದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಅಲ್ಲದೆ ತಮ್ಮ ಸಾಹಸ ಯಾವುದೇ ಸಾಧನೆ ಮಾಡಲು ವಯಸ್ಸು ಅಡ್ಡಿಯಾಗುವುದಿಲ್ಲ ಎಂಬ ಸಂದೇಶ ನೀಡಲಿದೆ ಎಂದಿದ್ದಾರೆ.
2008ರಲ್ಲಿ ತಮ್ಮ 76ನೇ ವಯಸ್ಸಿನಲ್ಲಿ `ಎವರೆಸ್ಟ್' ಏರಿದ್ದ ಬಹದ್ದೂರ್, ವಿಶ್ವದ ಅತ್ಯಂತ ಎತ್ತರದ ಶಿಖರ ಏರಿದ ಜಗತ್ತಿನ ಹಿರಿಯ ಎಂಬ ಕೀರ್ತಿಗೆ ಪಾತ್ರರಾಗಿದ್ದರು.
ಬಹದ್ದೂರ್ ಅವರ ಈ ವಿಶ್ವದಾಖಲೆಯನ್ನು ಜಪಾನ್‌ನ 80 ವರ್ಷದ ಯುಚಿರೊ ಮಿಯಾರ ಅವರು ಮುರಿದಿದ್ದರು. ಅಳಿಸಿ ಹೋದ ತನ್ನ ವಿಶ್ವದಾಖಲೆಯನ್ನು ಪುನಃ ಸ್ಥಾಪಿಸುವ ಸಲುವಾಗಿ ಬಹದ್ದೂರ್ ಮತ್ತೆ `ಎವರೆಸ್ಟ್' ಏರುವ ಯತ್ನದಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಬಾಲಿವುಡ್ ನಟ ನಾನಾ ಪಾಟೇಕರ್ ನಿಧನಕ್ಕೆ ಬಿಗ್ ಟ್ವಿಸ್ಟ್: ಅಸಹಜ ಸಾವು ಕೇಸ್ ದಾಖಲಿಸಿದ ಗೋವಾ ಪೊಲೀಸರು!

ರೈಲಿನಲ್ಲಿ 'ನನ್ನ ಸುತ್ತಲೂ ಬರೀ ಪುರುಷರೇ ಇದ್ದಾರೆ': ಆಂಧ್ರದಲ್ಲಿ ಶವವಾಗಿ ಪತ್ತೆಯಾದ ಡ್ಯಾನ್ಸರ್‌ ಕೊನೆಯ ಸಂದೇಶ!

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು: ಅಭಿಜೀತ್ ದೀಪ್ಕೆ