ಬೀಜಿಂಗ್: ಅರುಣಾಚಲ ಪ್ರದೇಶಕ್ಕೆ ದಲೈ ಲಾಮ ಭೇಟಿ ನೀಡಿರುವ್ದನ್ನು ವಿರೋಧಿಸುತ್ತಿರುವ ಚೀನಾ, ಮತ್ತೊಮ್ಮೆ ಭಾರತಕ್ಕೆ ಎಚ್ಚರಿಕೆ ನೀಡಿದ್ದು, ನಮ್ಮನ್ನು ಕುಗ್ಗಿಸಲು ದಲೈ ಲಾಮ ಅವರನ್ನು ದಾಳವನ್ನಗಿ ಬಳಸಿಕೊಳ್ಳಬೇಡಿ ಎಂದಿದೆ.
ಈ ಹಿಂದೆ ಹಲವು ಕಾರಣಗಳಿಗಾಗಿ ಭಾರತ-ಚೀನಾದ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿತ್ತು ನಮಗೆ ತಿಳಿದಿದೆ ಆದ್ದರಿಂದ ದಲೈ ಲಾಮ ಅವರನ್ನು ದಾಳವನ್ನಾಗಿ ಬಳಕೆ ಮಾಡಿಕೊಳ್ಳುವುದನ್ನು, ಟಿಬೆಟ್ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದನ್ನು ಭಾರತ ಬಿಡಬೇಕು ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್ ಹೇಳಿದ್ದಾರೆ.
ಟಿಬೆಟ್ ನ ವಿಷಯದಲ್ಲಿ ಹಸ್ತಕ್ಷೇಪ ಮಾಡದೇ ಇರುವ ಬದ್ಧತೆಯನು ಭಾರತ ಪ್ರದರ್ಶಿಸಿದರೆ ಗಡಿ ವಿವಾದ ಇತ್ಯರ್ಥಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಲಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್ ಅಭಿಪ್ರಾಯಪಟ್ಟಿದ್ದಾರೆ.